![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೊಡ್ಡಬಳ್ಳಾಪುರ: ಹಿರಿಯ ರಾಜಕಾರಣಿ ದಿ.ಆರ್.ಎಲ್.ಜಾಲಪ್ಪ ನಡೆದು ಬಂದ ಹಾದಿಯ ಕುರಿತು ಮುಂದಿನ ತಲೆಮಾರಿಗೆ ತಿಳಿಸಲು ನಗರದ ಕೊಡಿಗೇಹಳ್ಳಿ ರಸ್ತೆಯ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ಬಳಿಯಿರುವ ಸಮಾಧಿ ಬಳಿ ವಿಗ್ರಹ ಸ್ಥಾಪನೆ, ಮ್ಯೂಸಿಯಂ ನಿರ್ಮಿಸಲು ನಿರ್ಣಯಿಸಲಾಗಿದೆ ಎಂದು ಆರ್.ಎಲ್‌ಜಾಲಪ್ಪರ ಪುತ್ರ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜೆ.ರಾಜೇಂದ್ರ ತಿಳಿಸಿದರು.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ನಗರದ ಜಾಲಪ್ಪ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಮಾಹಿತಿ ನೀಡಿದ ಅವರು, ಜಾಲಪ್ಪರ ಅಗಲಿಕೆಯ ವೇಳೆ ಗೌರವಯುತ ಅಂತ್ಯಕ್ರಿಯೆಗೆ ಕುಟುಂಬದ ಒತ್ತಾಸೆಯಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ದೊಡ್ಡಬಳ್ಳಾಪುರ ತಾಲೂಕಿನ ಜನತೆ ಹಾಗೂ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳನ್ನು ನಮ್ಮ ಕುಟುಂಬದ ಪರವಾಗಿ ಅರ್ಪಿಸುತ್ತೇವೆ.
ಜಾಲಪ್ಪರ ಜೀವನದ ಹಾದಿಯನ್ನು ನೆನಪಾಗಿಸಲು ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ಬಳಿಯಿರುವ ಸಮಾಧಿ ಬಳಿ ವಿಗ್ರಹ ಸ್ಥಾಪನೆ, ಮ್ಯೂಸಿಯಂ ನಿರ್ಮಿಸಿ, 1962ರಿಂದ 2021ರ ವರೆಗಿನ ಸ್ಮರಣೀಯ ಪೋಟೋಗಳನ್ನು ಅಳವಡಿಸಲು ನಿರ್ಣಯಿಸಲಾಗಿದೆ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಇದೇ ಡಿ.29ರಂದು ದಿ.ಆರ್.ಎಲ್.ಜಾಲಪ್ಪರ ವೈಕುಂಠ ಸಮಾರಾಧನೆ ಕಾರ್ಯಕ್ರಮ ನಡೆಸಲು ನಿರ್ಣಯಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ ಎಂದರು.
ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ನಾಗೇಂದ್ರ ಸ್ವಾಮಿ ಮಾತನಾಡಿ, ರಾಜಕೀಯ ಮುತ್ಸದ್ದಿಯಾದ ಜಾಲಪ್ಪನವರು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಅಪಾರ. ಅವರ ಆಸೆಯಂತೆ ಸ್ಥಾಪನೆಯಾಗಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೆ ಡೊನೇಷನ್ ಇಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ನಮ್ಮಮುಂದಿನ ಜವಾಬ್ದಾರಿ. ಅಲ್ಲದೆ ತೂಬಗೆರೆಯಲ್ಲಿನ ವೃದ್ದಾಶ್ರಮವನ್ನು ಮುಂದುವರೆಸಲಾಗುವುದು. ಅವರ ಭವಿಷ್ಯದ ಯೋಜನೆಯಾಗಿದ್ದ ವೈದ್ಯಕೀಯ ಕಾಲೇಜನ್ನು (ಹೆಲ್ತ್ ಯುನಿವರ್ಸಿಟಿ) ನಮ್ಮ ದೊಡ್ಡಬಳ್ಳಾಪುರ ಕ್ಯಾಂಪಸ್ ನಲ್ಲಿಯೇ ನಿರ್ಮಿಸಲು ಎಲ್ಲಾ ರೀತಿಯ ಸಿದ್ದತೆಗೆಗಳು ಹೀಗಾಗಲೇ ಪ್ರರಂಬಿಸಲಾಗಿದೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….