ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಯುಷ್ ಇಲಾಖೆಯಿಂದ ನಡೆದ ಆಸ್ತಮ ಸಂಬಧಿತ ರೋಗಗಳಿಗೆ ಬಾಳೆಹಣ್ಣಿನ ಆಯುರ್ವೇದ ಔಷಧ ವಿತರಣಾ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ಆಯುಷ್ ಮಿಷನ್ ಉಪನಿರ್ದೇಶಕ ಡಾ.ಮುರಳಿಕೃಷ್ಣ ಮಾತನಾಡಿ, ವಾತಾವರಣದಲ್ಲಿ ಹೆಚ್ಚಿನ ತೇವಾಂಶದಿಂದಾಗಿ ಮನುಷ್ಯನ ಉಸಿರಾಟದಲ್ಲಿ ಏರುಪೇರುಗಳಾಗುತ್ತವೆ. ನೆಗಡಿ, ಕೆಮ್ಮು ಹಾಗೂ ಇತ್ಯಾದಿ ಅಲರ್ಜಿಗಳು ಸಹ ಆರಂಭವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಂತಹಾ ಸಂದರ್ಭಗಳಲ್ಲಿ ಆಯುರ್ವೇದ ಅತ್ಯಂತ ಸುಲಭವಾಗಿ ಹಾಗೂ ಶಾಶ್ವತವಾಗಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಪ್ರಕೃತಿಯಲ್ಲಿ ಸಿಗುವ ನೈಸರ್ಗಿಕ ಔಷಧಗಳಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದ್ದು, ಬಾಳೆಹಣ್ಣಿನ ಆಯುರ್ವೇದ ಔಷಧ ಈ ದಿಸೆಯಲ್ಲಿ ಪರಿಣಾಮಕಾರಿ ಔಷಯಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಕಾರಿ ಡಾ.ಖದ್ಸಿಯ ತಸ್ನೀಮ್ ಔಷ ಸೇವಿಸುವ ವಿಧಾನವನ್ನು ವಿವರಿಸಿ, ಪ್ರತಿ ವರ್ಷಕ್ಕೆ ಒಮ್ಮೆ ನೀಡುವ ಬಾಳೆ ಹಣ್ಣಿನ ಔಷಧಕ್ಕೆ ಈ ಹುಣ್ಣಿಮೆಯಂದು ಮಾತ್ರ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಬಾಳೆ ಹಣ್ಣಿನ ಔಷಧವನ್ನು ರಾತ್ರಿ, ತಾರಸಿಯ ಮೇಲೆ ಸೂಕ್ತ ಬಂದೋಬಸ್ತ್‍ನಲ್ಲಿರಿಸಬೇಕು. ಚಂದ್ರನ ಬೆಳದಿಂಗಳ ಕಿರಣಗಳು ಹಣ್ಣಿನ ಮೇಲೆ ಬೀಳುವಂತಿರಬೇಕು. ಔಷಧಿ ಸೇವಿಸುವವರಿಗೆ ಬಾಳೆಹಣ್ಣನ್ನು ಕುಟುಂಬದ ಸದಸ್ಯರು ಹಾಸಿಗೆ ಬಳಿಯೇ ತಂದು ನೀಡಬೇಕು. ಬೆಳಿಗ್ಗೆ ಹಾಸಿಗೆಯಲ್ಲಿಯೇ ಕಣ್ಣನ್ನು ತೆರೆಯದೇ ನೆಲಕ್ಕೆ ಕಾಲು ಊರದೇ, ಒಂದೇ ಬಾರಿಗೆ ತೆಗೆದುಕೊಳ್ಳಬೇಕು. ಔಷಧಕ್ಕೆ ಚಂದ್ರನ ಕಿರಣಗಳಿಂದ ಮಹತ್ವದ ಸತ್ವ ಬರುತ್ತದೆ. ಈ ವೇಳೆ ಮಾತನಾಡಬಾರದು. ಔಷಧಿ ಸೇವಿಸಿದ ನಂತರ ಶೀತದ ಪದಾರ್ಥಗಳನ್ನು ತಿನ್ನಬಾರದು. ವೈದ್ಯರು ನೀಡಿರುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು. ಪ್ರತಿಯೊಬ್ಬರೂ ಸಹ ತಮ್ಮ ಮನೆಯಲ್ಲಿರುವ ಔಷಧೀಯ ಗುಣಗಳುಳ್ಳ ಸಸಿಗಳನ್ನು ಹಾಗೂ ವಸ್ತುಗಳನ್ನು ಗುರುತಿಸಿ, ಜ್ಞಾನ ಪಡೆದುಕೊಂಡಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ.ಲಲಿತಾ, ಡಾ.ಸರಿತಾ ರಾಣಿ, ನೋಡಲ್ ಅಕಾರಿ ಡಾ.ಹರಿಪ್ರಸಾದ್, ಆಯುರ್ವೇದ ಆಸ್ಪತ್ರೆಯ ನಿರ್ವಾಹಕ ಕೇಶವ್ ಮತ್ತಿತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….