ದೊಡ್ಡಬಳ್ಳಾಪುರ: ಡಿಸೆಂಬರ್ 25 ರಿಂದ 28 ವರೆಗೆ ರಾಜಸ್ಥಾನ ರಾಜ್ಯದ ಜೈಪುರದಲ್ಲಿ ನಡೆಯಲಿರುವ 46ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಕರ್ನಾಟಕ ರಾಜ್ಯದಿಂದ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಪೂರ್ವಿತ್.ಎಸ್ (8-10 ವರ್ಷ ವಿಭಾಗ ) ದ್ವಿತೀಯ ಸ್ಥಾನ, ಜಾಹ್ನವಿ.ಎಂ.ಆರ್ (12-14 ವರ್ಷ ವಿಭಾಗ) ತೃತೀಯ ಸ್ಥಾನ, ವಿನಯ್ ಕುಮಾರ್.ಕೆ (14-16 ವರ್ಷ ವಿಭಾಗ) ಪ್ರಥಮ ಸ್ಥಾನ, ವರಪ್ರಸಾದ್.ವಿ (16-18 ವರ್ಷ ವಿಭಾಗ) ಪ್ರಥಮ ಸ್ಥಾನ, ಪುನೀತ್.ಎಲ್.ಎ (16-18 ವರ್ಷ ವಿಭಾಗ) ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದೇ ಸ್ಪರ್ಧೆಯಲ್ಲಿ ಹಿತೇಶ್.ಎ (8-10 ವರ್ಷ ವಿಭಾಗ) ಐದನೇ ಸ್ಥಾನ, ಹಿತಶ್ರೀ ಕೆ.ಎಂ (8-10 ವರ್ಷ ವಿಭಾಗ) ಆರನೇ ಸ್ಥಾನ, ಜ್ಯೇಷ್ಠ.ಎಸ್ (12-14 ವರ್ಷ ವಿಭಾಗ) ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ.
ವಿಜೇತರನ್ನು ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷ ಎಚ್.ಸಿ.ರವೀಂದ್ರ, ಕಾರ್ಯದರ್ಶಿ ಯೋಗ ನಟರಾಜ್, ಖಜಾಂಚಿ ಶ್ಯಾಮ ಸುಂದರ್, ಯೋಗ ಶಿಕ್ಷಕ ಎಚ್.ಸಿ.ಶಿವಕುಮಾರ್ ಅಭಿನಂದಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….