Site icon ಹರಿತಲೇಖನಿ

ಕನ್ನಡಿಗರು ಮಹಾರಾಷ್ಟ್ರದವರ ಹುಡುಕಲು ಆರಂಭಿಸಿದರೆ..? ಮುಂದಾಗುವ ಪರಿಣಾಮದ ಪ್ರಜ್ಞೆ ಇರಲಿ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ರಾಜಘಟ್ಟ ರವಿ ಆಕ್ರೋಶ

Channel Gowda
Hukukudi trust

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸಂಬಂಧದ ಬಿರುಕು ಹೆಚ್ಚಾಗುತ್ತಿದೆ. ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್‌ಗಳು ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಗೆಯೇ ಅಂಗಡಿಗಳನ್ನು ಸಹ ಧ್ವಂಸಗೊಳಿಸಿದ್ದಾರೆ.

Aravind, BLN Swamy, Lingapura

ಈ ಕುರಿತು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡಿಗರ ತಾಳ್ಮೆಯನ್ನು ಪದೇ ಪದೇ ಕೆಣುಕುವ ದುಸ್ಸಾಹಸಕ್ಕೆ ಎಂಇಎಸ್ ಮತ್ತು ಶಿವಸೇನಾ ಮುಂದಾಗುತ್ತಿದೆ. ಶಿವಸೇನಾ ಸರ್ಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಕೆಲ ಪುಂಡರು ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಹಾಗೂ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೂ ಮಹಾರಾಷ್ಟ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ರೀತಿ ಕನ್ನಡಿಗರು ಕರ್ನಾಟಕದಲ್ಲಿ ಮಹಾರಾಷ್ಟ್ರದವರ ಹುಡುಕಲು ಆರಂಭಿಸಿದರೆ ಪರಿಣಾಮ ಏನಾಗಲಿದೆ ಎಂಬ  ಪರಿಜ್ಞಾನ ಅಲ್ಲಿನ ಸರ್ಕಾರಕ್ಕೆ ಇರಬೇಕು.

ಮಹಾರಾಷ್ಟ್ರ ಸರ್ಕಾರ ಈ ಕೂಡಲೇ ಕನ್ನಡಿಗರಿಗೆ ತೊಂದರೆ ಕೊಡುತ್ತಿರುವ ಪುಂಡರ ಬಂಧಿಸಿ ಗೂಂಡ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಬೇಕಿದೆ ಎಂದು ಒತ್ತಾಯಿಸಿದರು.

Aravind, BLN Swamy, Lingapura

ಎಂಇಎಸ್ ನಿಷೇಧಿಸಿ: ಎಂಇಎಸ್ ನ ಅತಿರೇಕದ ವರ್ತನೆಯನ್ನು ಮಟ್ಟಹಾಕದೇ. ಕರ್ನಾಟ ರಾಜ್ಯ ಸರ್ಕಾರ ಕೈಕಟ್ಟಿಕುಳಿತಿದೆ. ಕ್ರಮದ ಕುರಿತು ಕೇವಲ ಹೇಳಿಕೆಗೆ ಸಿಮೀತವಾಗದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೆ ಎಂಇಎಸ್ ಮೇಲೆ ನಿಷೇಧವನ್ನು ಹೇರಬೇಕೆಂದು ರಾಜಘಟ್ಟ ರವಿ ಒತ್ತಾಯಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version