Site icon ಹರಿತಲೇಖನಿ

ದೊಡ್ಡಬೆಳವಂಗಲ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವಿ.ಗಜೇಂದ್ರ ವರ್ಗಾವಣೆ

Channel Gowda
Hukukudi trust

ದೊಡ್ಡಬಳ್ಳಾಪುರ:  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಬಂಧಿಸಲು ಮುಂದಾದ ಪೊಲೀಸ್ ಸಿಬ್ಬಂದಿಯ  ಹತ್ಯೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಮೇಲೆ ತಾಲೂಕಿನಲ್ಲಿಯೇ ಪ್ರಪ್ರಥಮ ಎನ್ನಲಾದ ಶೂಟ್ ಔಟ್ ನಡೆಸಿ ಆರೋಪಿಯ ಬಂಧಿಸುವ ಗಮನ ಸೆಳೆದಿದ್ದ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವಿ.ಗಜೇಂದ್ರ ವರ್ಗಾವಣೆಯಾಗಿದ್ದಾರೆ.

Aravind, BLN Swamy, Lingapura

2018ರ ಜನವರಿ ತಿಂಗಳಲ್ಲಿ ಅತ್ತಿಬೆಲೆ ಪೊಲೀಸ್ ಠಾಣೆಯಿಂದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ನೇಮಕಗೊಂಡ ನಂತರ ಗಜೇಂದ್ರರ ಶಿಸ್ತುಬದ್ಧ ಕಾರ್ಯವೈಖರಿಯಿಂದಾಗಿ ಬಹು ಬೇಗ ತಾಲೂಕಿನ ಜನರ ಮನ್ನಣೆಗೆ ಪಾತ್ರವಾದರು.

ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ನಿಧಿ ಶೋಧ ಪ್ರಕರಣದಡಿಯಲ್ಲಿ ತ್ವರಿತಗತಿಯ ಆರೋಪಿಗಳ ಬಂಧಿಸಿ ಬಲಿಗಾಗಿ ಸಿದ್ದಮಾಡಲಾಗುತ್ತಿದ್ದ ಎರಡು ಜೀವಗಳ ರಕ್ಷಣೆ, ಕೋಳಿ ಪಂದ್ಯದಲ್ಲಿ  ಭಾಗಿಯಾದ್ದ 70 ಜನ ಬಂಧನ, ಅನುಮಾನಸ್ಪದವಾಗಿ ಸಿಕ್ಕ ತಲೆಬುರುಡೆಯ ಬೆನ್ನತ್ತಿ ಕೊಲೆ ಆರೋಪಿಗಳ ಬಂಧನ.

Aravind, BLN Swamy, Lingapura

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಆಲಹಳ್ಳಿ ಬಳಿ ತಾಲೂಕಿನಲ್ಲಿ ಪ್ರಪ್ರಥಮವಾಗಿ ಶೂಟೌಟ್ ನಡೆಸಿ ಹತ್ಯೆ ನಡೆಸಲು ಮುಂದಾದ ಮಲ್ಲೋಹಳ್ಳಿಯ ರೌಡಿಶೀಟರ್ ಬಂಧನ, ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರದ ದೂರನ್ನು ಬೆನ್ನತ್ತಿ ಟ್ಯಾಕ್ಸಿ ಚಾಲಕ ಹಾಗು ಆತನ ಗೆಳೆಯರ ಬಂಧನ, ನೂರಾರು ಜೂಜು ಅಡ್ಡೆಯ ಮೇಲೆ ದಾಳಿ ಸೇರಿದಂತೆ ಹಲವು ಪ್ರಕರಣಗಳ ಇತ್ಯರ್ಥಗೊಳಿಸಿದಲ್ಲದೆ. ಕಳೆದ ಎರಡು ವರ್ಷ 10 ತಿಂಗಳ ಅವಧಿಯಲ್ಲಿ ತಾಲೂಕಿನ ಜನತೆಯ ವಿಶ್ವಾಸಾರ್ಹ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಡೆಸಿದ್ದರು.

ರವಿ.ಡಿ.ಚೆನ್ನಣ್ಣನವರ್ ನೇತೃತ್ವದಲ್ಲಿ ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದಲ್ಲಿ ನಮ್ಮೂರಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜನೆ, ಕರೊನಾ ಸೋಂಕು ತಡೆಗಟ್ಟಲು ಕಾರ್ಯ ನಿರ್ವಹಣೆಯಲ್ಲಿ ಭಾಗಿಯಾಗಿ ಸ್ವಯಂ ಕರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ನಂತರ ಕರ್ತವ್ಯ ನಿರ್ವಹಿಸಿ ಪ್ರಶಂಸೆ ಪಾತ್ರರಾಗಿದ್ದ ಗಜೇಂದ್ರ ಮತ್ತೆ ದೊಡ್ಡಬೆಳವಂಗಲಕ್ಕೆ ವರ್ಗಾವಣೆಯಾಗಿದ್ದರು.

ಕಳೆದ ಒಂದು ವರ್ಷದಿಂದ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಇವರು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಬಿಎಂಟಿಎಫ್ ವಿಭಾಗಕ್ಕೆ ವರ್ಗಾವಣೆಗೊಂಡಿದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜ್ಞಾನಮೂರ್ತಿ ಅವರು ಗಜೇಂದ್ರ ಅವರ ಸ್ಥಾನಕ್ಕೆ ನೇಮಕವಾಗಿದ್ದಾರೆ.

ಉನ್ನತ ಅಧಿಕಾರಿ ಸಲಹೆ, ಪ್ರೋತ್ಸಾಹ ಹಾಗೂ ತಾಲೂಕಿನ ಜನರ ಸಹಕಾರಕ್ಕೆ ಋಣಿ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಜನರ ಸಹಕಾರ ಅಪಾರವಾಗಿತ್ತು. ನನ್ನ ಯಾವುದೇ ಸಾಧನೆಯ ಹಿಂದೆ ಹಿರಿಯ ಅಧಿಕಾರಿಗಳ ಸಲಹೆ, ಪ್ರೋತ್ಸಾಹ ಸಿಬ್ಬಂದಿಗಳ ಸಹಕಾರ ಹೆಚ್ಚಾಗಿತ್ತು. ಇಷ್ಟು ದಿನಗಳ ಕಾಲ ಬಹಳಷ್ಟು ಪ್ರೀತಿ, ಸಹಕಾರ ನೀಡಿದ ತಾಲೂಕಿನ ಜನತೆ ಹೃದಯ ಪೂರ್ವಕ ಧನ್ಯವಾದಗಳು ಎಂದು ಹರಿತಲೇಖನಿ ಮೂಲಕ ತಿಳಿಸಿರುವ ಗಜೇಂದ್ರ ಅವರು, ಮತ್ತೆ ದೊಡ್ಡಬಳ್ಳಾಪುರದಲ್ಲಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version