Site icon ಹರಿತಲೇಖನಿ

ಅತ್ಯಾಚಾರ ಆನಂದಿಸಿ ಎಂಬ ಹೇಳಿಕೆಗೆ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

Channel Gowda
Hukukudi trust

ಬೆಂಗಳೂರು: ವಿಧಾನಸಭೆಯಲ್ಲಿ ಆಡಿದ ಮಾತು ವಿವಾದ ಸೃಷ್ಟಿಸಿ, ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕಮಾರ್‌ ಶುಕ್ರವಾರ ಸದನದಲ್ಲಿ ಕ್ಷಮೆ ಯಾಚಿಸಿದ್ದಾರೆ.

Aravind, BLN Swamy, Lingapura

ಇಂದು ವಿಧಾನಸಭೆ ಅಧಿವೇಶನ  ಆರಂಭಕ್ಕೂ ಮುನ್ನ ಮಾತನಾಡಿದ ರಮೇಶ್ ಕುಮಾರ್,  ಲಘುವಾಗಿ ವರ್ತಿಸಬೇಕೆಂಬ ಉದ್ದೇಶ ನನಗಿರಲಿಲ್ಲ. ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರೆ ಕ್ಷಮೆ ಕೇಳಲು ನನಗೆ ಯಾವುದೇ ತೊಂದರೆ ಇಲ್ಲ. ನನ್ನ ಹೃದಯಾಳದಿಂದ ನಾನು ಕ್ಷಮೆಯಾಚಿಸುತ್ತೇನೆ ಎಂದರು.

ಇದನ್ನು ಬೆಳೆಸುವುದು ಬೇಡ ಇಲ್ಲಿಗೆ ಮುಗಿಸಿ ಎಂದು ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಅವರು ಸಹ ಸದನದಲ್ಲಿ ಮನವಿ ಮಾಡಿದರು.

Aravind, BLN Swamy, Lingapura

ಗುರುವಾರ ಮಳೆಯಿಂದ ಬೆಳೆ ನಷ್ಟ, ಪ್ರವಾಹದಿಂದ ಸಮಸ್ಯೆ ಕುರಿತ ಚರ್ಚೆ ಸಂದರ್ಭದಲ್ಲಿ ಸದಸ್ಯರು ತಾವು ಮಾತಾಡಬೇಕು ಎಂದು ಒತ್ತಾಯಿಸಿದಾಗ ಸ್ಪೀಕರ್‌ ವಿಶೇಶ್ವರ ಹೆಗಡೆ ಕಾಗೇರಿ, ಹೀಗೆ ಎಲ್ಲರೂ ಬೇಡಿಕೆ ಇಟ್ಟರೆ ನನಗೆ ಸದನ ನಡೆಸುವುದು ಕಷ್ಟವಾಗುತ್ತದೆ’ಎಂದರು. ಆ ವೇಳೆ ಮಧ್ಯಪ್ರವೇಶ ಮಾಡಿದ ರಮೇಶ್‌ಕುಮಾರ್‌ ಮಾತಿನ ಭರದಲ್ಲಿ, ವೆನ್‌ರೇಪ್‌ ಈಸ್‌ ಇನ್ವಿಟೇಬಲ್‌ ಲೇ ಬ್ಯಾಕ್‌ ಅಂಡ್‌ ಎಂಜಾಯ್‌’ (ಅತ್ಯಾಚಾರ ಅನಿವಾರ್ಯ ಆದಾಗ ಮಲಗಿ ಆನಂದಿಸಿ) ಎಂದು ಹೇಳಿದರು. ಸ್ಪೀಕರ್‌ ಕಾಗೇರಿ ಅವರು, “ಈಗ ಪರಿಸ್ಥಿತಿ ಎಂಜಾಯ್‌ ಮಾಡಬೇಕು ಅನ್ನುವ ಹಾಗಾಗಿದೆ ನನ್ನ ಸ್ಥಿತಿ’ ಎಂದು ಹೇಳಿದರು. ಆದರೆ, ರಮೇಶ್‌ ಕುಮಾರ್‌ ಮಾತು ವಿವಾದಕ್ಕೆ ಗುರಿಯಾಗಿ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗಿ ಮಹಿಳಾ ಸಂಘಟನೆಗಳಿಂದ ಅಕ್ರೋಶ ವ್ಯಕ್ತವಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version