![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೊಡ್ಡಬಳ್ಳಾಪುರ: ಚುನಾವಣೆ ಜವಬ್ದಾರಿ ಹೊರದ ಪಕ್ಷದ ಮುಖಂಡರಿಂದ ಸೋಲುಂಟಾಗಿದ್ದು, ನಂಬಿಕೆ ದ್ರೋಹ ಮಾಡಿರುವ ಬಿಜೆಪಿ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ನಾಗರಾಜ್, ನಗರ ಅಧ್ಯಕ್ಷ ಶಿವಶಂಕರ್ ರಾಜೀನಾಮೆ ನೀಡಿ, ಪಕ್ಷದಿಂದ ಹೊರಹೋಗಬೇಕೆಂದು ವಿಧಾನಪರಿಷತ್ ಚುನಾವಣೆ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ.ಸಿ.ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ನಗರದ ಬಿಜೆಪಿ ಜಿಲ್ಲಾ ಕಾರ್ಯಾಗಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಚುನಾವಣೆ ಫಲಿತಾಂಶದ ಕುರಿತಂತೆ ಅವರು ಮಾತನಾಡಿದರು.
ತಾಲೂಕಿನಲ್ಲಿ ಪಕ್ಷದ ಎಲ್ಲಾ ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಪಕ್ಷದ ಮತಗಳು ದೊರಕಿಲ್ಲ, ಸೋಲಿಗಿಂತ ಪಕ್ಷದ ಬೆಂಬಲಿತ ಸದಸ್ಯರು ಬೆಂಬಲಿಸಲಿಲ್ಲ ಎಂಬುದು ಬೇಸರಕ್ಕೆ ಕಾರಣವಾಗಿದೆ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಉಸ್ತುವಾರಿ ಸಚಿವರು, ಇತರೆ ತಾಲೂಕಿನ ಮುಖಂಡರು ಬೆಂಬಲಿಸುವ ಭರವಸೆ ನೀಡಿದ್ದರು ಆದರೆ ನಿರೀಕ್ಷಿತ ಬೆಂಬಲ ದೊರಕಿಲ್ಲ. ಆದರೆ ತಾಲೂಕಿನಲ್ಲಿ 168 ಮತದಾರರು ಪಕ್ಷದ ಮತವನ್ನು ನೀಡದೇ ಇರಲು ಕಾರಣವೇನು..? ಇದಕ್ಕೆ ಕಾರಣ ಯಾರು..? ತಾಲೂಕು ಅಧ್ಯಕ್ಷ, ನಗರ ಅಧ್ಯಕ್ಷರ ಮಾಡಿರುವ ನಂಬಿಕೆ ದ್ರೋಹದ ಸಂಪೂರ್ಣ ಮಾಹಿತಿ ತಿಳಿದು ಬಂದಿದೆ.
ಸಾಸಲು ಹೋಬಳಿ, ಮಧುರೆ, ನಗರದ ಮತಗಳು ಎಲ್ಲಿವೆ ಎಂದ ಅವರು, ಪಕ್ಷದ ಮುಖಂಡರಾದ ಅಶ್ವಥ್ ನಾರಾಯಣಕುಮಾರ್, ಕೆ.ಟಿ.ಕೃಷ್ಣಪ್ಪ, ನಾಗರಾಜ್, ಶಿವಶಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇತರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಹಿತಿ ನನಗಿಲ್ಲ. ಪಕ್ಷದ ನಿಷ್ಠಾವಂತನಾಗಿ ಕಣಕ್ಕಿಳಿದೆ ಆದರೆ ತೀವ್ರ ಮನಸ್ಸಿಗೆ ನೋವುಂಟಾಗಿದೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….