ಕಾರ್ಕಳ: ಗೋಮಾತೆ ರಕ್ಷಣೆ ಇವತ್ತಿನ ಅತಿ ಅಗತ್ಯಗಳಲ್ಲೊಂದು. ಗೋಮಾತೆ ರಕ್ಷಣೆಗೆ ಪ್ರತಿಮನೆಯಲ್ಲೂ ತಲವಾರು ಖರೀದಿಸಿ ಇಟ್ಟುಕೊಳ್ಳಿ ಎಂದು ಕಾರ್ಕಳದಲ್ಲಿ ಸಾಧ್ವಿ ಸರಸ್ವತಿ ಕರೆ ನೀಡಿದ್ದಾರೆ.
ಕಾರ್ಕಳದಲ್ಲಿ ಭಾನುವಾರ ನಡೆದ ಹಿಂದೂ ಸಂಗಮ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡುತ್ತಾ, ಮಹಾರಾಷ್ಟ್ರದಲ್ಲಿ ನಡೆದ ಒಂದು ಘಟನೆಯನ್ನು ಉಲ್ಲೇಖಿಸಿ ತಲವಾರು ಹಿಡಿದುಕೊಳ್ಳಲು ಕರೆ ನೀಡಿದ್ದಾರೆ.
ಗೋ ಹಂತಕರ ಹಾವಳಿ ಮಿತಿ ಮೀರಿದೆ. ಹೀಗಾಗಿ ಅದರ ರಕ್ಷಣೆ ಅತೀ ಅಗತ್ಯವಾಗಿದೆ. ನಾನು ಗೋಶಾಲೆಯಲ್ಲೇ ಹುಟ್ಟಿ ಬೆಳೆದವಳು. ನೀವೆಲ್ಲ ಕಂಪ್ಯೂಟರ್, ಮೊಬೈಲ್ ಗಳಿಗಾಗಿ ಸಾವಿರಾರು, ಲಕ್ಷಾಂತರ ರೂ ಖರ್ಚು ಮಾಡುತ್ತೀರಿ. ಗೋಮಾತೆ ರಕ್ಷಣೆಗೆ ಪ್ರತಿ ಮನೆಯಲ್ಲೂ ಒಂದು ಸಾವಿರ ರೂ ಖರ್ಚು ಮಾಡಿ ತಲುವಾರು ಖರೀದಿಸಿ ಇಟ್ಟುಕೊಳ್ಳಿ ಎಂದು ಸಾಧ್ವಿ ಕರೆ ನೀಡಿದ್ದಾರೆ.
ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆದ ಹಿಂದೂ ಸಂಗಮದಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….