Site icon ಹರಿತಲೇಖನಿ

ಸಿರಿಧಾನ್ಯಗಳ ಉತ್ಪಾದನೆಯಿಂದ ರೈತರ ಆದಾಯ ಹೆಚ್ಚಾಗಲಿದೆ: ಸುಶೀಲಮ್ಮ

Channel Gowda
Hukukudi trust

ದೊಡ್ಡಬಳ್ಳಾಪುರ: ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ರೈತರ ತಾಕುಗಳಲ್ಲಿ ಸಿರಿಧಾನ್ಯಗಳಾದ ನವಣೆ, ಸಾವೇ, ಹಾರಕ, ಕೊರಲು,ಸಜ್ಜೆ ಬೆಳೆಯುವ ಪ್ರಾತ್ಯಕ್ಷತೆಗಳನ್ನು ಕೈಗೊಂಡು ರೈತರಿಗೆ ನೂತನ ತಾಂತ್ರಿಕತೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ ಹೇಳಿದರು.

Aravind, BLN Swamy, Lingapura

ತಾಲ್ಲೂಕಿನ ತೂಬಗೆರೆಯಲ್ಲಿ ಶುಕ್ರವಾರ ನಡೆದ 2021-22ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿನಯ ಯೋಜನೆಯಡಿ ಸಿರಿಧಾನ್ಯಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. 

ಇತ್ತೀಚೆಗೆ ಸಿರಿಧಾನ್ಯಗಳ ಆಹಾರ ಸೇವನೆ ಕುರಿತಂತೆ ಜನರಲ್ಲಿ ಆಸಕ್ತಿ ಮೂಡಿದೆ. ಆದರೆ ರೈತರು ಸಿರಿಧಾನ್ಯ ಬೆಳೆಯುವ ಕಡೆಗೆ ಹಾಗೂ ಅವುಗಳ ಒಕ್ಕಣೆ ಕುರಿತಂತೆ ಅಷ್ಟಾಗಿ ಆಸಕ್ತಿವಹಿಸುತ್ತಿಲ್ಲ. ದೇಶದ ಜನರ ಆರೋಗ್ಯ ದೃಷ್ಠಿಯಿಂದ ಸಿರಿಧಾನ್ಯಗಳ ಅಗತ್ಯ ತುಂಬಾ ಇದೆ. ಸಿರಿಧಾನ್ಯಗಳ ಒಕ್ಕಣೆ ಸೇರಿದಂತೆ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮಾರುಕಟ್ಟೆ ಸೌಲಭ್ಯಗಳನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದರು.      

Aravind, BLN Swamy, Lingapura

ಪ್ರಗತಿಪರ ರೈತ ರಾಜು ಸಿರಿಧಾನ್ಯಗಳ ಬಳಕೆಯ ಮಹತ್ವ, ಸಿರಿಧಾನ್ಯಗಳನ್ನು ಬೆಳೆಯುವ ವಿಧಾನಗಳ ಕುರಿತಂತೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತಾಂತ್ರಿಕ ಕೃಷಿ ಅಧಿಕಾರಿ ರೂಪ, ಕೃಷಿ ಅಧಿಕಾರಿ ಹರೀಶ್, ಕಸ್ತೂರಯ್ಯ ಹಾಗೂ ಸ್ವಯಂ ಸೇವಾ ಸಂಘದ ಸದಸ್ಯರು ಇದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version