ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ಇಂದು ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆ ತಾಲೂಕಿನಲ್ಲಿ ಶೇ.26.04ರಷ್ಟು ಮತದಾನವಾಗಿದೆ.
ನೀರಸವಾಗಿ ಆರಂಭವಾದ ಮತದಾನ ಪ್ರಕ್ರಿಯೆ ಸಮಯ ಕಳೆದಂತೆ ಬಿರುಸು ಕಂಡಿದೆ.
ಚುನಾವಣೆ ಇಲಾಖೆ ನೀಡಿರುವ 12ಗಂಟೆಯ ಮಾಹಿತಿ ಅನ್ವಯ ತಾಲೂಕಿನಲ್ಲಿ 66 ಪುರುಷರು, 70 ಮಂದಿ ಮಹಿಳೆಯರು ಸೇರಿ ಒಟ್ಟು 136 ಮಂದಿ ಮತದಾನ ಚಲಾವಣೆ ಮಾಡಿದ್ದು, ಶೇ.26.04ರಷ್ಟು ಮತದಾನವಾಗಿದೆ.
ತಾಲೂಕಿನಲ್ಲಿ 250 ಪುರುಷ ಮತದಾರರು, 265 ಮಹಿಳಾ ಮತದಾರರು ಸೇರಿದಂತೆ ಒಟ್ಟು 515 ಮತದಾರರಿದ್ದಾರೆ.
ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಕಾಂಗ್ರೆಸ್ ನ ನಗರಸಭೆಯ ಸದಸ್ಯರು ನಗರಸಭೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರೆ. ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸಂದೇಶ್ ನೇತೃತ್ವದಲ್ಲಿ ಸದಸ್ಯರು ಗ್ರಾಮಪಂಚಾಯಿತಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ವೇಳೆ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….