Site icon ಹರಿತಲೇಖನಿ

ಆರೋಗ್ಯಕರ ಆಹಾರಾಭ್ಯಾಸ ರೂಢಿಸಿಕೊಂಡು, ಅಪೌಷ್ಟಿಕತೆ ನಿರ್ಮೂಲನೆಗೆ ಸಹಕರಿಸಿ

Channel Gowda
Hukukudi trust

ಬೆಂ.ಗ್ರಾ.ಜಿಲ್ಲೆ: ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿರುವ ತಾಯಂದಿರು ಹಾಗೂ ಮಕ್ಕಳು ಆರೋಗ್ಯಕರ ಆಹಾರಾಭ್ಯಾಸ ರೂಢಿಸಿಕೊಳ್ಳುವ ಮೂಲಕ ಅಪೌಷ್ಟಿಕತೆಯ ನಿರ್ಮೂಲನೆಗೆ ಸಹಕರಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು. 

Aravind, BLN Swamy, Lingapura

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸೇವ್‌ದಿ ಚಿಲ್ಡ್ರನ್ ಸಂಸ್ಥೆ, ಐಕಿಯಾ ಸಂಸ್ಥೆ ಹಾಗೂ ಸ್ಪಿರುಲಿನಾ ಫೌಂಡೇಷನ್ ಸಹಯೋಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸಖಿ ಕೇಂದ್ರದಲ್ಲಿಂದು, ಸಖಿ ಕೇಂದ್ರಕ್ಕೆ ಪರಿಕರಗಳು ಹಾಗೂ ಅಪೌಷ್ಟಿಕ ಮಕ್ಕಳಿಗೆ ಸ್ಪಿರುಲಿನಾ ಚಿಕ್ಕಿಯನ್ನು ವಿತರಿಸಿ, ಅವರು ಮಾತನಾಡಿದರು.

‘ಸಖಿ’ ಯೋಜನೆಯ ಸೌಲಭ್ಯಗಳನ್ನು ಸದುಪಯೋಗ ಪಡೆಯುವಂತೆ ತಿಳಿಸಿದರಲ್ಲದೆ, ಮಕ್ಕಳ ತಾಯಂದಿರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ಪಿರುಲಿನಾ ಚಿಕ್ಕಿಯನ್ನು ಕ್ರಮಬದ್ದವಾಗಿ ದಿನನಿತ್ಯದ ಆಹಾರದ ಜೊತೆಗೆ ಬಳಸುವ ಮೂಲಕ ಪೌಷ್ಟಿಕಾಂಶ ಹೆಚ್ಚಿಸಬಹುದು ಎಂದು ಹೇಳಿದರು.

Aravind, BLN Swamy, Lingapura

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್.ಎಸ್., ಜಿಲ್ಲಾ ನಿರೂಪಣಾಧಿಕಾರಿ ಆರ್.ವೆಂಕಟೇಶ್ ರೆಡ್ಡಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನಿತಾಲಕ್ಷ್ಮೀ, ಸೇವ್‌ದಿ ಚೈಲ್ಡ್ ಸಂಸ್ಥೆಯ ಚಂದ್ರಶೇಖರ್, ಐಕಿಯಾ ಸಂಸ್ಥೆ ವಿಜಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version