Site icon ಹರಿತಲೇಖನಿ

ಬೆಂ.ಗ್ರಾ.ಜಿಲ್ಲೆ: ವಿವಿಧ ಯೋಜನೆಗಳಡಿ ನೇಕಾರರಿಂದ ಅರ್ಜಿ ಆಹ್ವಾನ

Channel Gowda
Hukukudi trust

ಬೆಂ.ಗ್ರಾ.ಜಿಲ್ಲೆ: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2021-22ನೇ ಸಾಲಿಗೆ ನೇಕಾರರಿಗೆ ನೆರವು ನೀಡಲು ಹಾಗೂ ನೇಯ್ಗೆ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುವಂತೆ ವಿವಿಧ ಯೋಜನೆಗಳಾದ ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆ, ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ 02 ವಿದ್ಯುತ್ ಮಗ್ಗ ಘಟಕ ಸ್ಥಾಪನೆ ಹಾಗೂ ಹೊಸ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯನಿರತ ಕೈಮಗ್ಗ/ವಿದ್ಯುತ್ ಮಗ್ಗ ಕೂಲಿ ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ. 

Aravind, BLN Swamy, Lingapura

ಯೋಜನೆ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಫಲಾನುಭವಿಗಳು ಬ್ಯಾಂಕಿನಲ್ಲಿ ಸಾಲ ಪಡೆದು, ಘಟಕವನ್ನು ಸ್ಥಾಪಿಸಿದ ನಂತರ ಅರ್ಹತೆಯನುಸಾರ ಸಹಾಯಧನವನ್ನು ಮರುಪಾವತಿ ಆಧಾರದ ಮೇಲೆ ಮಂಜೂರು ಮಾಡಲಾಗುವುದು.

ಆಸಕ್ತ ಫಲಾನುಭವಿಗಳು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿಯನ್ನು ವೆಬ್‍ಸೈಟ್: njn.karnatakadht.org/weavers/ej-2loom-apply ನಲ್ಲಿ ಆನ್‍ಲೈನ್ ಮೂಲಕ 2021ರ ಡಿಸೆಂಬರ್ 15ರೊಳಗೆ ಸಲ್ಲಿಸುವುದು.

Aravind, BLN Swamy, Lingapura

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಗಾಮೆರ್ಂಟ್ಸ್ ತರಬೇತಿ ಕೇಂದ್ರದ ಕಟ್ಟಡ, ಕೆಐಎಡಿಬಿ ಅಪೇರಲ್ ಪಾರ್ಕ್, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ-561203 ಹಾಗೂ ಕಚೇರಿ ದೂರವಾಣಿ ಸಂಖ್ಯೆ: 080-29501945 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕರಾದ ಸೌಮ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version