ದೊಡ್ಡಬಳ್ಳಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ, ಶೈಕ್ಷಣಿಕ ತರಬೇತಿ ಸಂಸ್ಥೆ ವತಿಯಿಂದ ವಿಜ್ಞಾನ ದೀಪ್ತಿ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರಿಗೆ ಪ್ರಯೋಗಗಳ ಪ್ರಾತ್ಯಕ್ಷತೆ ಕಾರ್ಯಗಾರ ತಾಲೂಕಿನ ದೊಡ್ಡಬೆಳವಂಗಳ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಿತು.
ಕಾರ್ಯಗಾರವನ್ನು ಡಯಟ್‍ನ ಹಿರಿಯ ಉಪನ್ಯಾಸಕರಾದ ರವಿಕುಮಾರ್ ಉದ್ಘಾಟಿಸಿ, ಪ್ರಯೋಗಗಳ ಮೂಲಕ ಅರಿಯುವ ವಿಜ್ಞಾನ ಹೆಚ್ಚು ಪ್ರಭಾವಶಾಲಿಯಾಗಿದ್ದು, ಮಕ್ಕಳಿಗೆ ಪುಸ್ತಕ ಜ್ಞಾನದ ಜೊತೆಯಲ್ಲಿ ಪ್ರಯೋಗಗಳು ಹಾಗೂ ಪರಿಸರದ ಅಧ್ಯಯನಕ್ಕೆ ಶಿಕ್ಷಕರು ಒತ್ತು ನೀಡಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕರಾದ ಮೋನಿಕಾ ಮತ್ತು ಹಿರಿಯ ಪ್ರಾಥಮಿಕ ವಿಭಾಗದ ಗೀತಾಬಾಯಿ ಅಂಚಿಪುರ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಯೋಗಾಲಯದಲ್ಲಿ ಪ್ರತ್ಯಕ್ಷವಾಗಿ ಪ್ರಯೋಗಗಳನ್ನು ನಡೆಸಿ ಶಿಕ್ಷಕರಿಗೆ ವಿವರಣೆಯನ್ನು ನೀಡಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸುನಿತಾ ಉದ್ಘಾಟಿಸಿದರು
ಡಯಟ್ ಉಪನ್ಯಾಸಕರಾದ ಅನುಪಮಾ,ಶಿವಮ್ಮ, ಸಿದ್ದೇಶ್ವರ ಶಾಲೆಯ ಹಿರಿಯ ಶಿಕ್ಷಕ ವೀರಕ್ಯಾತಯ್ಯ ಮೊದಲಾದವರು ಭಾಗವಹಿಸಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….