Site icon ಹರಿತಲೇಖನಿ

ದಿನ ಭವಿಷ್ಯ: ಬುಧವಾರ ಡಿಸೆಂಬರ್ 01, 2021, ದೈನಂದಿನ ರಾಶಿ ಭವಿಷ್ಯ / ಈ ರಾಶಿಯವರಿಗೆ ವಾತಾವರಣ ಬದಲಾವಣೆಯಿಂದ ದೇಹಾರೋಗ್ಯದಲ್ಲಿ ಏರುಪೇರು

Channel Gowda
Hukukudi trust

ಮೇಷ: ಈ ರಾಶಿಯವರಿಗೆ ವಾತಾವರಣ ಬದಲಾವಣೆಯಿಂದ ದೇಹಾರೋಗ್ಯದಲ್ಲಿ ಏರುಪೇರಾದೀತು. ಹೊಸ ಜನರ ಭೇಟಿ ಮನಸ್ಸಿಗೆ ಸಂತೋಷ ಕೊಡಲಿದೆ. ಆಪ್ತರೊಂದಿಗೆ ಕಿರು ಸಂಚಾರ ಮಾಡಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

Aravind, BLN Swamy, Lingapura

ವೃಷಭ: ಈ ರಾಶಿಯವರು  ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳಬೇಡಿ. ಕೌಟುಂಬಿಕವಾಗಿ ಹೊಂದಾಣಿಕೆ ಕಾಪಾಡಿಕೊಳ್ಳುವ ಜವಾಬ್ಧಾರಿ ನಿಮ್ಮದಾಗುವುದು. ಆರ್ಥಿಕವಾಗಿ ಹಣಕಾಸಿನ ಹರಿವಿದ್ದರೂ ಖರ್ಚು ವೆಚ್ಚಗಳಾಗಲಿವೆ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಈ ರಾಶಿಯವರಿಗೆ ಬಹುದಿನಗಳ ನಂತರ ಆಪ್ತ ಮಿತ್ರರ ಭೇಟಿಯಾದ ಸಂತೋಷ ದೊರಕಲಿದೆ. ಹಿರಿಯರಿಗೆ ಆರೋಗ್ಯ ಸಮಸ್ಯೆಯಾದರೂ ಆತಂಕ ಬೇಕಿಲ್ಲ. ಹೊಸ ವಾಹನ ಖರೀದಿ ಕನಸು ನನಸಾಗಲಿದೆ.

Aravind, BLN Swamy, Lingapura

ಕಟಕ: ಈ ರಾಶಿಯವರು ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಭವಿಷ್ಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಾದೀತು. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.

ಸಿಂಹ: ಈ ರಾಶಿಯವರು ದೈನಂದಿನ ಕೆಲಸಗಳಿಂದ ಬಿಡುವು ಸಿಗಲಿದೆ. ಸಾಂಸಾರಿಕವಾಗಿ ಸುಂದರ ದಿನವಾಗಿದ್ದು, ಆಪ್ತರೊಂದಿಗೆ ಸಮಯ ಕಳೆಯಲಿದ್ದೀರಿ. ಮಕ್ಕಳಿಗೆ ಉಡುಗೊರೆ ನೀಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಕನ್ಯಾ: ಈ  ರಾಶಿಯವರು ಮನಸ್ಸಿಗೆ ಖುಷಿಯೆನಿಸುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಉದ್ಯೋಗ ರಂಗದಲ್ಲಿ ಬದಲಾವಣೆಯ ಪ್ರಯತ್ನಕ್ಕೆ ಫಲ ಸಿಗುವುದು. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ. ಕಿರು ಸಂಚಾರ ಮಾಡಲಿದ್ದೀರಿ.

ತುಲಾ: ಈ ರಾಶಿಯವರು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡುವ ಅನಿವಾರ್ಯತೆ ಎದುರಾಗಲಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ.

ವೃಶ್ಚಿಕ: ಈ ರಾಶಿಯ ನೂತನ ದಂಪತಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ನಿರುದ್ಯೋಗಿಗಳು ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಪಡೆಯಲಿದ್ದಾರೆ. ಅನಗತ್ಯ ಮಾತುಗಳಿಗೆ ಕಡಿವಾಣ ಹಾಕುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನಸ್ಸು: ಈ ರಾಶಿಯವರು ಅಸಮಾಧಾನಗಳನ್ನು ಬದಿಗೊತ್ತಿ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲಿದ್ದೀರಿ. ಮಕ್ಕಳಿಗೆ ಖುಷಿ ಕೊಡುವ ಘಟನೆಗಳು ನಡೆಯಲಿವೆ. ಬಂಧು ಮಿತ್ರರ ಭೇಟಿ ಮಾಡಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಮಕರ: ಈ ರಾಶಿಯವರು ಮನಸ್ಸಿನಲ್ಲಿದ್ದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗುವುದು. ಹೊಸ ಮಿತ್ರರ ಸಂಪಾದಿಸಲಿದ್ದೀರಿ. ಮಹಿಳೆಯರಿಗೆ ಕೆಲಸದೊತ್ತಡ ಹೆಚ್ಚಾದೀತು.

ಕುಂಭ: ಈ ರಾಶಿಯವರು ಸಂಗಾತಿಯ ಅಸಮಾಧಾನಕ್ಕೆ ಗುರಿಯಾದೀತು. ತಾಳ್ಮೆ, ಸಂಯಮವಿರಲಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ.

ಮೀನ: ಈ ರಾಶಿಯವರು ವೃತ್ತಿರಂಗದಲ್ಲಿ ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟ ಭೀತಿ ಎದುರಾಗಲಿದೆ. ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಪಡೆಯಲಿದ್ದೀರಿ.

ಮಾಸ: ಕಾರ್ತಿಕ ಮಾಸ

ಪಕ್ಷ: ಕೃಷ್ಣ ಪಕ್ಷ       

ತಿಥಿ: ದ್ವಾದಶಿ 

ನಕ್ಷತ್ರ: ಚಿತ್ತಾ ನಕ್ಷತ್ರ

ರಾಹುಕಾಲ: 12:12 ರಿಂದ 01:38

ಗುಳಿಕಕಾಲ: 10:46 ರಿಂದ 12:12

ಯಮಗಂಡಕಾಲ: 07:54 ರಿಂದ 09:20

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122

ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version