Site icon ಹರಿತಲೇಖನಿ

ದಿನ ಭವಿಷ್ಯ: ಶನಿವಾರ , ನವೆಂಬರ್ 27, 2021, ದೈನಂದಿನ ರಾಶಿ ಭವಿಷ್ಯ / ಈ ರಾಶಿಯವರ ಮಾತಿನ ಮೇಲೆ ಸಂಯಮವಿಲ್ಲದೇ ಹೋದರೆ ಸಂಘರ್ಷಗಳಾಗುವ ಸಾಧ್ಯತೆ

Channel Gowda
Hukukudi trust

ಮೇಷ: ಈ ರಾಶಿಯವರು ಹಿಂದೆ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

Aravind, BLN Swamy, Lingapura

ವೃಷಭ: ಈ ರಾಶಿಯವರು ವೃತ್ತಿರಂಗದಲ್ಲಿ ಉನ್ನತ ಸ್ಥಾನಕ್ಕೇರುವ ಅವಕಾಶಗಳು ಬಂದಾಗ ಸರಿಯಾಗಿ ಬಳಸಿಕೊಳ್ಳಿ. ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದ್ದು, ವ್ಯವಹಾರಗಳಲ್ಲಿ ಚೇತರಿಕೆ ಕಂಡುಬರುವುದು. ದೂರ ಸಂಚಾರ ಮಾಡಲಿದ್ದೀರಿ.

ಮಿಥುನ: ಈ ರಾಶಿಯವರ ಕೆಲಸದ ಸ್ಥಳದಲ್ಲಿ ಲಾಭ ಗಳಿಸುವ ಸಾಧ್ಯತೆಯಿದೆ. ಸಂಬಳ ಪಡೆಯುವ ಜನರಿಗೆ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಯನ್ನು ನೀಡಬಹುದು, ವ್ಯಾಪಾರಸ್ಥರು ಇಂದು ಹೆಚ್ಚು ಲಾಭ ನಿರೀಕ್ಷಿಸಬಹುದು.

Aravind, BLN Swamy, Lingapura

ಕಟಕ: ಈ ರಾಶಿಯವರ ಮನೆ-ಸಂಬಂಧಿತ ವಿಷಯಗಳಲ್ಲಿ ಯಶಸ್ವಿಯಾಗುತ್ತೀರಿ ಮತ್ತು ಒಮ್ಮೆ ಮಾರಾಟ ಮಾಡಲು ಯೋಜಿಸಿದರೆ ಲಾಭ ಗಳಿಸಬಹುದು. ಆರೋಗ್ಯದ ಬಗ್ಗೆ ಗಮನವಿರಲಿ.

ಸಿಂಹ: ಈ ರಾಶಿಯವರು ಆರೋಗ್ಯವನ್ನು ನೋಡಿಕೊಳ್ಳಿ. ನಿಮ್ಮ ಸಹೋದರ ಮತ್ತು ಸ್ನೇಹಿತನ ಬೆಂಬಲವು ಲಾಭ ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಸರ್ಕಾರಿ ಕೆಲಸ ಬಾಕಿ ಇದ್ದಲ್ಲಿ ಇಂದು ನೆರವೇರುತ್ತದೆ.

ಕನ್ಯಾ: ಈ ರಾಶಿಯವರ ಮಾತಿನ ಮೇಲೆ ಸಂಯಮವಿಲ್ಲದೇ ಹೋದರೆ ಸಂಘರ್ಷಗಳಾದೀತು. ದೈವಭಕ್ತಿ ಹೆಚ್ಚಾಗಲಿದ್ದು, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರುವುದು.

ತುಲಾ: ಈ ರಾಶಿಯವರು ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ.  ಕೆಲವರು ಮಕ್ಕಳಿಂದಾಗಿ ನೋವನ್ನು ಎದುರಿಸಬೇಕಾಗಬಹುದು.

ವೃಶ್ಚಿಕ: ಈ ರಾಶಿಯವರು ಉದ್ಯೋಗ ವ್ಯವಹಾರದಲ್ಲಿ ಕಷ್ಟಗಳು ಬಂದಾಗ ಮಿತ್ರರ ಸಹಾಯ ಸಿಗಲಿದೆ. ಸಾಂಸಾರಿಕವಾಗಿ ಸುಖ-ಸಮೃದ್ಧಿಗೆ ಕೊರತೆಯಿರದು. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ವಾಹನ ಸಂಚಾರದಲ್ಲಿ ಎಚ್ಚರ ಅಗತ್ಯ.

ಧನಸ್ಸು: ಈ ರಾಶಿಯವರು ಭೂಮಿ, ವಾಹನ ಇತ್ಯಾದಿ ಖರೀದಿ ವಿಚಾರದಲ್ಲಿ ಲಾಭವಾಗಲಿದೆ. ನಿರೀಕ್ಷಿತ ಸಮಯದಲ್ಲಿ ಸಹಾಯ ಒದಗಿಬರುವುದರಿಂದ ಕಷ್ಟಗಳಿಂದ ಪಾರಾಗಲಿದ್ದೀರಿ. ದಾನ ಧರ್ಮಾದಿಗಳಿಂದ ನೆಮ್ಮದಿ ಸಿಗಲಿದೆ.

ಮಕರ: ಈ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಜವಾಬ್ಧಾರಿ ಹೆಚ್ಚಾಗಲಿದ್ದು, ಧನ ಗಳಿಕೆಯ ಮಾರ್ಗವೂ ಕಂಡುಬರುವುದು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ನೂತನ ಮಿತ್ರರನ್ನು ಸಂಪಾದಿಸಲಿದ್ದೀರಿ.

ಕುಂಭ: ಈ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿದಾಯಕ ವಾತಾವರಣ ಕಂಡುಬರಲಿದೆ. ಮಿತ್ರರ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ.

ಮೀನ: ಈ ರಾಶಿಯವರು ಪಾಲುದಾರಿಕೆ ವ್ಯವಹಾರದಲ್ಲಿ ಉನ್ನತಿ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾಗಲಿದೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ.

ಮಾಸ: ಕಾರ್ತಿಕ ಮಾಸ

ಪಕ್ಷ: ಕೃಷ್ಣ ಪಕ್ಷ       

ತಿಥಿ: ಅಷ್ಟಮಿ 

ನಕ್ಷತ್ರ:  ಮಖಾ ನಕ್ಷತ್ರ

ರಾಹುಕಾಲ: 09:19 ರಿಂದ 10:45

ಗುಳಿಕಕಾಲ: 06:26 ರಿಂದ 07:53

ಯಮಗಂಡಕಾಲ: 01:37 ರಿಂದ 03:03

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

Exit mobile version