ದೊಡ್ಡಬಳ್ಳಾಪುರ: ಸತತ ಮಳೆಗೆ 23 ವರ್ಷಗಳ ನಂತರ ತುಂಬಿದ ಕೆರೆಗೆ ಆಲೂರು ಗ್ರಾಮಸ್ಥರು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಆಲೂರು, ದುದ್ದನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಗ್ರಾಮಗಳಿಗೆ ಸೇರಿದಂತೆ ದೇವನಹಳ್ಳಿ – ದೊಡ್ಡಬಳ್ಳಾಪುರ ತಾಲೂಕಿಗೆ ಸೇರಿದ ಕೆರೆ ಎಂಬುದು ವಿಶೇಷ ಎಂದು ಆಲೂರು ಗ್ರಾಮದ ಪ್ರಸನ್ನ ತಿಳಿಸಿದ್ದಾರೆ.
ಇತ್ತೀಚಿಗೆ ಸುರಿದ ಮಳೆಯಿಂದ ಈ ಕೆರೆ ತುಂಬಿ ಕೋಡಿ ಹರಿದ ಕಾರಣ ಇಂದು ಆಲೂರಿನ ಗ್ರಾಮಸ್ಥರು ಪೂಜೆ ಸಲ್ಲಿಸಿ, ದೀಪಗಳನ್ನು ಬೆಳಗಿ, ಬಾಗಿನ ಅರ್ಪಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……