ದೊಡ್ಡಬಳ್ಳಾಪುರ: ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯ ಬೆಳೆಸಲು ಶ್ರಮಿಸಿದ ಮಹಾನ್ ಪುರುಷ ಕನಕದಾಸರು ಎಂದು ಆರ್.ಎಲ್.ಜಾಲಪ್ಪ ಸಮೂಹ ಸಂಸ್ಥೆಗಳ ನಿರ್ದೇಶಕ ಜೆ.ರಾಜೆಂದ್ರ ತಿಳಿಸಿದರು.
ನಗರದ ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕರ ಸಾಹಿತ್ಯ, ಜೀವನ ಪರಂಪರೆಗಳು ಅಜರಾಮರ. ಶ್ರೀಕೃಷ್ಣನನ್ನು ಒಲಿಸಿಕೊಂಡ ದಾಸಶ್ರೇಷ್ಠರು, ಕನ್ನಡ ಕಾವ್ಯ ಪರಂಪರೆಯ ಮೇರುಶಿಖರವೇ ಆಗಿರುವ ಶ್ರೀ ಕನಕದಾಸರ ಜಯಂತಿ ಇಂದು. ನಮ್ಮ ನೆಲದ ಅನನ್ಯ ತಾತ್ವಿಕ ಸಂತರಾದ ಅವರಿಗೆ ನನ್ನ ಶ್ರದ್ಧಾಪೂರ್ವಕ ನಮನಗಳು. ಆ ಪೂಜ್ಯರ ಮಾತುಗಳು ಸದಾ ಕಾಲ ನಮ್ಮ ಮನಗಳನ್ನು ಬೆಳಗಿಸುತ್ತಿವೆ ಎಂದರು.
ಮಾನವ ಸಂಪನ್ಮೂಲ ಅಧಿಕಾರಿ ಬಾಬು ರೆಡ್ಡಿ ಮಾತನಾಡಿ, ಮಕ್ಕಳು ರಾಷ್ಟ್ರೀಯ ಹಬ್ಬಗಳ ಆಚರಣೆ ಕುರಿತು ಮಾಹಿತಿ ತಿಳಿದುಕೊಳ್ಳುವುದು ಅಗತ್ಯ.
ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಕಾರರಲ್ಲಿ ಕನಕದಾಸರು ಒಬ್ಬರು. 15-16ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಾಗಿದ್ದರು. ಇವರು ಆಧುನಿಕ ಕರ್ನಾಟಕದ ಕವಿ, ತತ್ವಜ್ಞಾನಿ, ಸಂಗೀತಗಾರ ಮತ್ತು ಸಂಯೋಜಕರಾಗಿದ್ದು, ಕೀರ್ತನೆ ಮತ್ತು ಉಗಾಭೋಗಕ್ಕೆ ಹೆಸರುವಾಸಿಯಾಗಿದ್ದಾರೆ. ಕೀರ್ತನೆಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳವಾಗಿ ಕನ್ನಡ ಭಾಷೆಯಲ್ಲಿ ರಚಿಸಿ, ಎಲ್ಲಾ ಕಾಲಘಟ್ಟಕ್ಕೂ ಸಲ್ಲುವಂತೆ ಮಾಡಿದ್ದಾರೆ. ಅವರ ಹಿತೋಪದೇಶ ವಿದ್ಯಾರ್ಥಿಗಳು ಪಾಲಿಸಬೇಕು ಎಂದರು.
ಈ ವೇಳೆ ಶಾಲೆಯ ಉಪಪ್ರಾಂಶುಪಾಲರಾದ ಧನಂಜಯ, ವ್ಯವಸ್ಥಾಪಕ ರವಿಕುಮಾರ್ ಹಾಗೂ ಶಿಕ್ಷಕರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……