Site icon ಹರಿತಲೇಖನಿ

ನ.22ರಂದು ದೊಡ್ಡಬಳ್ಳಾಪುರದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಮಹೋತ್ಸವ

Channel Gowda
Hukukudi trust

ದೊಡ್ಡಬಳ್ಳಾಪುರ: ನಗರದ ಟಿ.ಬಿ.ಸರ್ಕಲ್ ಸಮೀಪವಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಮತ್ತು ರಾಣುಸಂತೂಬಾಯಿ ದೇವಿಯರ ಸ್ಥಿರ ಬಿಂಬ, ಪ್ರತಿಷ್ಠಾಪನೆ ಮತ್ತು ಕುಂಬಾಭಿಷೇಕ ಮಹೋತ್ಸವ ನ.22ರ ಸೋಮವಾರದಂದು ನಡೆಯಲಿದೆ.

Aravind, BLN Swamy, Lingapura

ಪ್ರತಿಷ್ಠಾಪನೆ ಮಹೋತ್ಸವವು ಆಗಮಿಕರಾದ ಪಿ.ಗೋಪಿಕೃಷ್ಣ ಶರ್ಮ, ವಿ.ಎಸ್.ಚಂದ್ರಮೌಳಿ ಶಾಸ್ತ್ರಿಘಿ ಮತ್ತು ಕೆ.ಎನ್.ರವೀಂದ್ರನಾಥ ಶರ್ಮ ನೇತೃತ್ವದಲ್ಲಿ ನಡೆಯಲಿದೆ.

ಜೀರ್ಣೋದ್ಧಾರ ಮಹೋತ್ಸವದ ಪೂರ್ವವಾಗಿ ನ.21ರ ಭಾನುವಾರದಂದು ಬೆಳಗ್ಗೆ 6.30ರಿಂದ ಷೋಡಷೋಪಚಾರ ಪೂಜೆ, ರುದ್ರಾಭಿಷೇಕ, ಚಂಡೀ ಪಾರಾಯಣ, ಮಹಾಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯ ಹೋಮ, ಮಹಾಮಂಗಳಾರತಿ ಮತ್ತು ತೀರ್ಥ, ಪ್ರಸಾದ ವಿನಿಯೋಗ ಇರಲಿದೆ. 

Aravind, BLN Swamy, Lingapura

ನ.22ರ ಸೋಮವಾರದಂದು ಬೆಳಗ್ಗೆ 5.45ರಿಂದ 6.15 ಗಂಟೆಯೊಳಗೆ ಪ್ರಾಣ ಪ್ರತಿಷ್ಠಾಪನೆ, ಕಳಾವಾಹನ, ಕದಳೀ ವೃಕ್ಷ ಛೇದನ, ರುದ್ರ ಹೋಮ, ಲಕ್ಷ್ಮೀ ನಾರಾಯಣ ಹೋಮ, ಚಂಡಿಕಾ ಹೋಮ, ಪ್ರತಿಷ್ಠಾ ಹೋಮ, ಮಹಾಪೂರ್ಣಾಹುತಿ, ಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ.

ಪ್ರತಿಷ್ಠಾಪನೆ ಮಹೋತ್ಸವಕ್ಕೆ ಸಕಲ ಭಕ್ತರು ಆಗಮಿಸಬೇಕೆಂದು ಪ್ರಕಟಣೆ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

Exit mobile version