ದೊಡ್ಡಬಳ್ಳಾಪುರ: ಹವಾಮಾನ ವೈಪರೀತ್ಯದ ಕಾರಣ ಸತತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಹಲವೆಡೆ ಮನೆಗಳು ಕುಸಿದಿವೆ.
ಶಾಂತಿನಗರದ ಮಹೇಶ್ ಎನ್ನುವವರ ಮನೆಯ ಗೋಡೆ ಕುಸಿದ ಕಾರಣ, ಪ್ಲಾಸ್ಟಿಕ್ ಪೇಪರ್ ಹೊದಿಸಿ ಜೀವನ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ತಾಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೆಟ್ಟದ ಸೊಣ್ಣೆನಹಳ್ಳಿ ಗ್ರಾಮದ ಪರಮೇಶಯ್ಯ ಎನ್ನುವವರಿಗೆ ಸೇರಿದ ಮನೆಯ ಗೋಡೆ ಕುಸಿದಿದ್ದು, ಪರಮೇಶಯ್ಯ ಕುಟುಂಬ ಮನೆಯಿಲ್ಲದೆ ದೊಡ್ಡಬಳ್ಳಾಪುರದ ಸಹೋದರನ ಮನೆಯಲ್ಲಿ ವಾಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.
ಮತ್ತೊಂದೆಡೆ ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಂಡಮ್ಮನಹಳ್ಳಿ ಗ್ರಾಮದಲ್ಲಿ ಬಂಡಿ ಮಹಾಕಾಳಿದೇವಾಲಯದ ಗೋಡೆ ಕುಸಿದಿದೆ.
ಸತತವಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ಹಾನಿಯಾಗಿದ್ದು ರೈತರು ಪರಿತಪಿಸುವಂತಾಗಿದೆ. ಫಸಲ್ ವಿಮಾ ಯೋಜನೆಯ ಪರಿಹಾರ ಪಡೆಯಲು ಕೃಷಿ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಸ್ಥಳ ಪರಿಶೀಲನೆ ನಡೆಸಬೇಕೆಂದು ರೈತರು ಒತ್ತಾಯಿಸಿದರೆ. ಮನೆ ಕಳೆದುಕೊಂಡ ಬಡ ಕುಟುಂಬಕ್ಕೆ ನೆರವಾಗಲು ತಾಲೂಕು ಆಡಳಿತ ಕಂದಾಯ ಇಲಾಖೆಯವರಿಗೆ ವರದಿ ನೀಡುವಂತೆ ಸೂಚಿಸಲು ಮನವಿ ಮಾಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……