Site icon ಹರಿತಲೇಖನಿ

ಈ ರಾಶಿಯವರಿಗೆ ಗುರುಹಿರಿಯರೊಂದಿಗೆ ಸಂಘರ್ಷಗಳಾಗದಂತೆ ಎಚ್ಚರಿಕೆ ಅಗತ್ಯ / ದಿನ ಭವಿಷ್ಯ: ಗುರುವಾರ ನವೆಂಬರ್ 18, 2021, ದೈನಂದಿನ ರಾಶಿ ಭವಿಷ್ಯ

Channel Gowda
Hukukudi trust

ಮೇಷ: ಈ ರಾಶಿಯವರಿಗೆ ಮಾನಸಿಕವಾಗಿ  ಕಾಡುತ್ತಿದ್ದ ಸಮಸ್ಯೆಗಳಿಗೆ ಆತ್ಮೀಯರಿಂದ ಪರಿಹಾರ ಸಿಗಲಿದೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗುವುದು. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ವ್ಯಾವಹಾರಿಕವಾಗಿ ಮುನ್ನಡೆಯಿರುವುದು.

Aravind, BLN Swamy, Lingapura

ವೃಷಭ: ಈ ರಾಶಿಯವರ ಕೆಲಸ ಕಾರ್ಯದ ಬಗ್ಗೆ ಅತೃಪ್ತಿಯಾದೀತು. ಉದ್ಯೋಗ ಬದಲಾವಣೆಗೆ ಪ್ರಯತ್ನ ನಡೆಸಲಿದ್ದೀರಿ. ಇತರರ ಕಷ್ಟಗಳಿಗೆ ಸ್ಪಂದಿಸಲು ಹೋಗಲಿದ್ದೀರಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಚಿಂತೆ ಬೇಡ.

ಮಿಥುನ: ಈ ರಾಶಿಯವರು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡುವ ಅನಿವಾರ್ಯತೆ ಎದುರಾಗಲಿದೆ. ಸಂಗಾತಿಯೊಂದಿಗೆ ಮನಸ್ತಾಪಗಳಾಗದಂತೆ ನೋಡಿಕೊಳ್ಳಿ. ಆದಾಯ ವೃದ್ಧಿಗೆ ದಾರಿ ಕಂಡುಕೊಳ್ಳಲಿದ್ದೀರಿ. ತಾಳ್ಮೆ ಅಗತ್ಯ.

Aravind, BLN Swamy, Lingapura

ಕಟಕ: ಈ ರಾಶಿಯವರ ದೈನಂದಿನ ಕೆಲಸಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಗುರುಹಿರಿಯರೊಂದಿಗೆ ಸಂಘರ್ಷಗಳಾಗದಂತೆ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಒದಗಿಬರಲಿದೆ.

ಸಿಂಹ: ಈ ರಾಶಿಯವರು ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ಕಾಡದಂತೆ ಎಚ್ಚರಿಕೆ ವಹಿಸಿ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾದೀತು. ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಿ ನೆಮ್ಮದಿಯಾಗಲಿದೆ.

ಕನ್ಯಾ: ಈ  ರಾಶಿಯವರು ಮಾನಸಿಕವಾಗಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಗಳನ್ನು ಮಾಡಲಿದ್ದೀರಿ. ಸಂಗಾತಿಯ ಮಾತುಗಳು ಮನಸ್ಸಿಗೆ ಹಿತವೆನಿಸೀತು. ಮಹಿಳೆಯರಿಗೆ ಗೃಹದಲ್ಲಿ ಹೆಚ್ಚು ಕೆಲಸದ ಒತ್ತಡ ಬೀಳಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ಈ ರಾಶಿಯವರು ವ್ಯಾಪಾರದಲ್ಲಿ ಹೆಚ್ಚಿನ ಲಾಭ ಪಡೆಯುವರು. ಅನಿರೀಕ್ಷಿತವಾಗಿ ನಡೆಯುವ ಕೆಲವೊಂದು ಘಟನೆಗಳು ಜೀವನಕ್ಕೆ ಮಹತ್ತರ ಬದಲಾವಣೆ ತರಲಿದೆ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ.

ವೃಶ್ಚಿಕ: ಈ ರಾಶಿಯವರಿಗೆ ಕೌಟುಂಬಿಕವಾಗಿ ಸುಂದರ ಕ್ಷಣ ಕಳೆಯುವ ಯೋಗ. ಹಿರಿಯರು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ. ಆರ್ಥಿಕವಾಗಿ ಖರ್ಚುವೆಚ್ಚಗಳಿದ್ದರೂ ಆದಾಯಕ್ಕೆ ಕೊರತೆಯಿರದು. ಚಿಂತೆ ಬೇಡ.

ಧನಸ್ಸು: ಈ ರಾಶಿಯವರ ಕೆಲವೊಂದು ಮಾತುಗಳು ಸಂಗಾತಿಯ ಅಸಮಾಧಾನಕ್ಕೆ ಕಾರಣವಾಗಬಹುದು. ಬೇರೆಯವರು ನಿಮ್ಮ ಜೀವನದಲ್ಲಿ ಮೂಗು ತೂರಿಸಲು ಅವಕಾಶ ಕೊಡಬೇಡಿ. ಕಾರ್ಯನಿಮಿತ್ತ ಓಡಾಟದಿಂದ ದೇಹಾಯಾಸವಾದೀತು.

ಮಕರ: ಈ ರಾಶಿಯವರು ಹೊಸದಾಗಿ ಉದ್ಯೋಗಕ್ಕೆ ಸೇರ್ಪಡೆಯಾದವರಿಗೆ ಹೊಂದಾಣಿಕೆ ಕಷ್ಟವೆನಿಸಬಹುದು. ತಾಳ್ಮೆ, ಸಂಯಮ ಅಗತ್ಯ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ಜೋಪಾನವಾಗಿರಿ. ಮನೆಗೆ ಅನಿರೀಕ್ಷಿತ ಬಂಧು ಮಿತ್ರರ ಆಗಮನವಾಗಲಿದೆ.

ಕುಂಭ: ಈ ರಾಶಿಯವರ ವಿಚಾರಗಳಿಗೆ ಸಂಗಾತಿಯ ಅಸಹಕಾರ ಅಸಹನೆ ಉಂಟು ಮಾಡೀತು. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಕಷ್ಟದ ಸಮಯದಲ್ಲಿ ಸಹೋದರ ವರ್ಗದವರಿಂದ ಸಹಾಯ ಒದಗಿಬರುವುದು.

ಮೀನ: ಈ ರಾಶಿಯವರು ಸಹೋದ್ಯೋಗಿಗಳ ಸಹಕಾರದಿಂದ ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವಿಶೇಷ ವ್ಯಕ್ತಿಗಳ ಭೇಟಿಯಾಗಲಿದ್ದೀರಿ. ಕೌಟುಂಬಿಕವಾಗಿ ನೆಮ್ಮದಿಯಿರಲಿದೆ.

ಸಂವತ್ಸರ: ಶ್ರೀ ಪ್ಲವ ನಾಮ ಸಂವತ್ಸರ

ಆಯನ: ದಕ್ಷಿಣಾಯನ

ಋತು: ಶರದ್ ಋತು

ಮಾಸ: ಕಾರ್ತಿಕ ಮಾಸ

ಪಕ್ಷ: ಶುಕ್ಲ ಪಕ್ಷ       

ತಿಥಿ: ಚತುರ್ದಶಿ 

ನಕ್ಷತ್ರ: ಭರಣಿ ನಕ್ಷತ್ರ

ರಾಹುಕಾಲ: 01:35 ರಿಂದ 03:02

ಗುಳಿಕಕಾಲ: 09:15 ರಿಂದ 10:42

ಯಮಗಂಡಕಾಲ: 06:22 ರಿಂದ 07:48

ಈ ದಿನದ ವಿಶೇಷ: ನಂಜನಗೂಡು ಶ್ರೀಕಂಠಮುಡೀ ಉತ್ಸವ 

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

Exit mobile version