ದೊಡ್ಡಬಳ್ಳಾಪುರ: ತ್ರೈಮಾಸಿಕ ವಿದ್ಯುತ್ ಲೈನ್ ದುರಸ್ಥಿ ಕಾರ್ಯದ ಕಾರಣ ನವೆಂಬರ್ 10 ರಂದು ದಿನ ಪೂರ್ತಿ ವಿದ್ಯುತ್ ನಿಲುಗಡೆ ಮಾಡಿದ್ದ ಬೆಸ್ಕಾಂ. ಮತ್ತೆ ತಾಲೂಕಿನ ಜನತೆಗಿಂದು ವಿದ್ಯುತ್ ಕಡಿತ ಮಾಡಿ ಶಾಕ್ ನೀಡಲಿದೆ.
ತಾಲ್ಲೂಕಿನ 66/11 ಕೆ.ವಿ.ತೂಬಗೆರೆ ಮತ್ತು 66/11 ಕೆ.ವಿ.ಕನಸವಾಡಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಲ್ಲಿ ತ್ರೈಮಾಸಿಕ ವಿದ್ಯುತ್ ಲೈನ್ ದುರಸ್ಥಿ ಇರುವುದರಿಂದ ನ.16 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೂ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ ಎಂದು ಬೆಸ್ಕಾಂ ತಾಲ್ಲೂಕು ಘಟಕದ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ನಿಲುಗಡೆಯಾಗುವ ಗ್ರಾಮಗಳು ತೂಬಗೆರೆ, ಕಂಟನಕುಂಟೆ, ಹಾಡೋನಹಳ್ಳಿ, ಭೂಮೇನಹಳ್ಳಿ, ಎಸ್.ಎಸ್.ಘಾಟಿ, ಹೆಗ್ಗಡಿಹಳ್ಳಿ, ಮೆಳೆಕೋಟೆ, ನಂದಿಬೆಟ್ಟದ ಕ್ರಾಸ್, ಗಂಟಿಗಾನಹಳ್ಳಿ, ಅಂತರಹಳ್ಳಿ, ವಾಸುದೇವನಹಳ್ಳಿ, ಕಾಚಹಳ್ಳಿ, ಲಕ್ಷ್ಮೀದೇವಿಪುರ, ಮಲ್ಲಾತಹಳ್ಳಿ, ವಡ್ಡರಹಳ್ಳಿ, ಗೂಳ್ಯ, ಸೀಗೇಹಳ್ಳಿ, ಲಕ್ಕಸಂದ್ರ, ದುರ್ಗೇನಹಳ್ಳಿ, ಮಾಕಳಿ, ಕೋಡಿಪಾಳ್ಯ, ಮಧುರೆ, ಇಸ್ತೂರು, ಮಲ್ಲೋಹಳ್ಳಿ, ಹಾಲೇನಹಳ್ಳಿ, ಕನ್ನಮಂಗಲ, ರಾಮದೇನಹಳ್ಳಿ, ಮಾರಸಂದ್ರ, ಪುರುಷನಹಳ್ಳಿ, ಅಂಬಲಗೆರೆ, ಕಮ್ಮಸಂದ್ರ, ಕಾಡನೂರುಪಾಳ್ಯ, ಚಿಕ್ಕಮದುರೆ, ಸಿಂಪಾಡಿಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ತಿಳಿಸಿದೆ.
ಪದೇ ಪದೇ ನಿರ್ವಹಣೆ ಕಾರಣ ವಿದ್ಯುತ್ ಕಡಿತವಾದರು ನಿರಂತರ ವಿದ್ಯುತ್ ಪೂರೈಕೆ ನೀಡುವಲ್ಲಿ ಬೆಸ್ಕಾಂ ಇಲಾಖೆ ಕಾರ್ಯ ನಿರ್ವಹಿಸುತ್ತಿಲ್ಲವೇ ಅಥವಾ ಕಳಪೆ ಗುಣಮಟ್ಟದ ವಸ್ತುಗಳ ಬಳಕೆ ಕಾರಣವೇ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……