Site icon ಹರಿತಲೇಖನಿ

ಈ ರಾಶಿಯವರು ನೆರೆ ಹೊರೆಯವರ ಚಾಡಿಮಾತುಗಳನ್ನು ಅಲಕ್ಷಿಸುವುದು ಉತ್ತಮ / ದಿನ ಭವಿಷ್ಯ: ಸೋಮವಾರ ನವೆಂಬರ್ 15, 2021, ದೈನಂದಿನ ರಾಶಿ ಭವಿಷ್ಯ

Channel Gowda
Hukukudi trust

ಮೇಷ: ಈ ರಾಶಿಯವರ ಆತುರದ ನಿರ್ಧಾರಗಳಿಂದ ಅನಾಹುತವೇ ಹೆಚ್ಚು. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಂಗಾತಿಯ ಸಲಹೆ ಪಡೆಯುವುದು ಉತ್ತಮ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ.

Aravind, BLN Swamy, Lingapura

ವೃಷಭ: ಈ ರಾಶಿಯವರು ಬಹುದಿನಗಳಿಂದ ಕಾಡುತ್ತಿದ್ದ ಚಿಂತೆಗೆ ಪರಿಹಾರ ಕಂಡುಕೊಂಡ ನೆಮ್ಮದಿ ನಿಮ್ಮದಾಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಾದೀತು. ಆದರೆ ಸಂಗಾತಿಯ ಸಹಕಾರ ಮನಸ್ಸಿಗೆ ನೆಮ್ಮದಿ ಕೊಡುವುದು. ಅನಗತ್ಯ ಚಿಂತೆ ಬೇಡ.

ಮಿಥುನ: ಈ ರಾಶಿಯವರು  ಮಹಿಳೆಯರಿಂದ ನಿಮ್ಮ ಸುಖ-ಸಂತೋಷ ಇಮ್ಮಡಿಯಾಗಲಿದೆ. ವ್ಯಾಪಾರಿಗಳಿಗೆ ಧನಲಾಭವಾದೀತು. ನೆರೆಹೊರೆಯವರ ಚಾಡಿಮಾತುಗಳನ್ನು ಅಲಕ್ಷಿಸುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.

Aravind, BLN Swamy, Lingapura

ಕಟಕ: ಈ ರಾಶಿಯವರು ಮನೆಯಲ್ಲಿ ಶುಭಮಂಗಳ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ವೈಯಕ್ತಿಕ ಜೀವನದಲ್ಲಿ ಪ್ರಗತಿ ಉಂಟಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ತಾಳ್ಮೆಯಿರಲಿ.

ಸಿಂಹ: ಈ ರಾಶಿಯವರು ಪ್ರೀತಿ ಪಾತ್ರರ ಪ್ರೋತ್ಸಾಹಕರ ಮಾತುಗಳು ನಿಮ್ಮ ಉತ್ಸಾಹ ಹೆಚ್ಚಿಸಲಿದೆ. ಕೌಟುಂಬಿಕವಾಗಿ ಸಂತೋಷದಾಯಕ ದಿನಗಳಾಗಿವೆ. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳಿದ್ದರೂ ಆದಾಯಕ್ಕೆ ತೊಂದರೆಯಾಗದು.

ಕನ್ಯಾ: ಈ ರಾಶಿಯವರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಕಟ್ಟಡ ಕಾಮಗಾರಿ ಕೆಲಸಗಳನ್ನು ಮುಂದೂಡುವುದು ಉತ್ತಮ. ದಿನದಂತ್ಯಕ್ಕೆ ನೆಮ್ಮದಿ.

ತುಲಾ: ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ಸಂತೋಷ ಸಿಗುವುದು. ದೂರದ ನೆಂಟರಿಷ್ಟರನ್ನು ಭೇಟಿಯಾಗಲಿದ್ದೀರಿ. ವ್ಯವಹಾರದಲ್ಲಿ ಮುನ್ನಡೆಯಿರಲಿದೆ. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ.

ವೃಶ್ಚಿಕ: ಈ ರಾಶಿಯ ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಆಸ್ತಿ, ವಾಹನಾದಿ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಚಿಂತೆ ಬೇಡ.

ಧನಸ್ಸು: ಈ ರಾಶಿಯವರು ಹೊಸದಾಗಿ ಆರಂಭಿಸಿರುವ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರುವುದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವುದು.

ಮಕರ: ಈ ರಾಶಿಯವರು ಕೆಲಸ ಕಾರ್ಯಗಳಲ್ಲಿ ತಲ್ಲೀನತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಕಾರ್ಯನಿಮಿತ್ತ ಓಡಾಟದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಧನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ.

ಕುಂಭ: ಈ ರಾಶಿಯವರು ಸರಕಾರಿ ನೌಕರರಿಗೆ ಬಿಡುವಿನ ದಿನದ ಖುಷಿ ಸಿಗಲಿದೆ. ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗವಿದೆ. ಕೌಟುಂಬಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ಮನೆಗೆ ನೆಂಟರಿಷ್ಟರ ಆಗಮನ ಸಾಧ‍್ಯತೆಯಿದೆ.

ಮೀನ: ಈ ರಾಶಿಯವರಿಗೆ ಅನಿವಾರ್ಯ ಕಾರಣಗಳಿಗೆ ದೂರ ಸಂಚಾರ ಮಾಡಬೇಕಾಗಿ ಬಂದೀತು. ಸ್ವಜನರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾದೀತು.

ಸಂವತ್ಸರ: ಶ್ರೀ ಪ್ಲವ ನಾಮ  ಸಂವತ್ಸರ

ಆಯನ: ದಕ್ಷಿಣಾಯನ

ಋತು: ಶರದ್ ಋತು

ಮಾಸ: ಕಾರ್ತಿಕ ಮಾಸ

ಪಕ್ಷ: ಶುಕ್ಲ ಪಕ್ಷ       

ತಿಥಿ: ಏಕಾದಶಿ 

ನಕ್ಷತ್ರ: ಉತ್ತರಾಭದ್ರ ನಕ್ಷತ್ರ

ರಾಹುಕಾಲ: 07:47 ರಿಂದ 09:14

ಗುಳಿಕಕಾಲ: 01:35 ರಿಂದ 03:02

ಯಮಗಂಡಕಾಲ: 10:41 ರಿಂದ 12:08

ಈ ದಿನದ ವಿಶೇಷ: ಎರಡನೇ ಕಾರ್ತಿಕ ಸೋಮವಾರ, ಮೇಲುಕೋಟೆ ಚಲುವರಾಯ ರಥ 

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

Exit mobile version