ದೊಡ್ಡಬಳ್ಳಾಪುರ: ಅಭಿಮಾನಿಗಳ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 12 ದಿನ ಕಳೆದಿದೆ. 11ನೇ ದಿನದ ಪುಣ್ಯ ಸ್ಮರಣೆ ಕಾರ್ಯವನ್ನು ಬೆಂಗಳೂರಿನಲ್ಲಿ ಪುನೀತ್ ರಾಜ್‍ಕುಮಾರ್ ಕುಟುಂಬದವರು ಸೋಮವಾರ ನೆರವೇರಿಸಿದ್ದಾರೆ.
ಅದೇ ರೀತಿಯಲ್ಲಿ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಬೆಂಗಳೂರಿನಲ್ಲಿ ಪುನೀತ್ ರಾಜಕುಮಾರ್ ಸಮಾಧಿ ಸಿಂಗರಿಸಿದಂತೆ, ಅಪ್ಪು ಪೊಟೋ ಇಟ್ಟು ಹೂವಿನಿಂದ ಸಿಂಗರಿಸಿ, ಎಡೆ ಇಟ್ಟು ಪುಣ್ಯಸ್ಮರಣೆ ನೆರವೇರಿಸಿದರು. ಈ ವೇಳೆ ಅನ್ನಸಂತರ್ಪಣೆ ಮಾಡಲಾಯಿತು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..