ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಜ.1.2022ಕ್ಕೆ ಅನ್ವಯವಾಗುವಂತೆ 276 ಮತಗಟ್ಟೆಗಳ ಭಾವಚಿತ್ರವಿರುವ ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ತಹಶೀಲ್ದಾರ್ ಟಿ.ಎಸ್.ಶಿವರಾಜ್ ಬಿಡುಗಡೆ ಮಾಡಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರಡು ಮತದಾರರ ಪಟ್ಟಿಯನ್ನು ನಮೂನೆ-5ರೊಂದಿಗೆ ಸಾರ್ವಜನಿಕವಾಗಿ ಪ್ರಕಟಿಸಿರುವ ಕುರಿತು ಬಿಡುಗಡೆ ಮಾಡಲಾಯಿತು.
ಈ ವೇಳೆ ಚುನಾವಣಾ ಶಿರಸ್ತೇದಾರ್ ಕೆ.ಕಿರಣ್ ಕುಮಾರ್, ಆರ್.ಸುರೇಶ್, ಉಪತಹಶೀಲ್ದಾರ್ ತುಳಸೀರಾಮಯ್ಯ, ದೊಡ್ಡಬೆಳವಂಗಲ ರಾಜಸ್ವನಿರೀಕ್ಷಕರ ನಾರಾಯಣ್, ಚುನಾವಣಾ ಶಾಖೆ ಐ.ಟಿ. ಸಿಬ್ಬಂದಿ ರವಿಕುಮಾರ್.ವಿ., ನಗರಸಭೆ ಚುನಾವಣಾ ವಿಷಯ ನಿರ್ವಾಹಕ ಸುಲ್ತಾನ್ ಮತ್ತಿತರರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..