ದೊಡ್ಡಬಳ್ಳಾಪುರ: ನ.07 ರಿಂದ ನ.28ರ ವರೆಗೆ ಪ್ರತಿ ಭಾನುವಾರ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಆಂದೋಲನ Voter Helpline App (VHA) ಮೂಲಕ ನಡೆಸಲಾಗುತ್ತಿದೆ ಎಂದು ತಹಶಿಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ-2022ರ ಅನ್ವಯ ವಿಶೇಷ ಪರಿಷ್ಕರಣೆ ಆಂದೋಲನ ನಡೆಸಲಾಗುತ್ತಿದೆ. ನ.07ರಿಂದ ಆರಂಭವಾಗುವ ಈ ಆಂದೋಲನ ನ.14, ನ.21 ಹಾಗೂ ನ.28ರ ಭಾನುವಾರಗಳಂದು ನಡೆಯಲಿದೆ.
ಈ ವಿಶೇಷ ಆಂದೋಲನದಲ್ಲಿ Voter Helpline App (VHA) ಮೂಲಕ ಮತದಾರರ ಪಟ್ಟಿ ಸೇರ್ಪಡೆ / ತೆಗೆದುಹಾಕುವುದು / ತಿದ್ದುಪಡಿ / ವರ್ಗಾವಣೆಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಗಳ ಬಿ.ಎಲ್.ಓಗಳು ಮತ್ತು ಬಿ.ಎಲ್.ಓ.ಮೇಲ್ವಿಚಾರಕರ ಬಳಿ Voter Helpline App (VHA) ಮೂಲಕ ಸ್ಥಳದಲ್ಲಿಯೇ ನಮೂನೆ – 6,7,8 ಮತ್ತು 8ಎ ಅಪ್ಲೋಡ್ ಮಾಡಬಹುದಾಗಿ ಎಂದು ಶಿವರಾಜ್ ಅವರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……