Site icon ಹರಿತಲೇಖನಿ

ದಿನ ಭವಿಷ್ಯ: ಶನಿವಾರ , ನವೆಂಬರ್ 06, 2021, ದೈನಂದಿನ ರಾಶಿ ಭವಿಷ್ಯ / ಈ ರಾಶಿಯ ಮಹಿಳೆಯರಿಗೆ ಇಂದು ಅನಗತ್ಯವಾಗಿ ಅಪವಾದಗಳನ್ನು ಎದುರಿಸುವ ಸಂದರ್ಭ

Channel Gowda
Hukukudi trust

ಮೇಷ: ಈ ರಾಶಿಯವರು ಎಷ್ಟೇ ಅಭಿವೃದ್ಧಿಯಾಗಬೇಕೆಂದು ಯೋಚಿಸಿದರೂ ಒಂದೊಂದೇ ಸಮಸ್ಯೆಗಳು ಹೈರಾಣಾಗಿಸಲಿದೆ. ಪ್ರಯತ್ನಕ್ಕೆ ತಕ್ಕ ಫಲ ಸಿಗದೇ ನಿರಾಸೆಯಾದೀತು. ಆರೋಗ್ಯ ಸಂಬಂಧಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ.

Aravind, BLN Swamy, Lingapura

ವೃಷಭ: ಈ ರಾಶಿಯವರು ವಿಶೇಷ ವ್ಯಕ್ತಿಗಳನ್ನು ಭೇಟಿಯಾಗಬಹುದು. ಬಹುದಿನಗಳಿಂದ ಬಯಸಿದ್ದ ವಸ್ತು ನಿಮ್ಮ ಕೈ ಸೇರಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ವ್ಯಾಪಾರಿಗಳು ವ್ಯವಹಾರದಲ್ಲಿ ಮುನ್ನಡೆ ಅನುಭವಿಸಲಿದ್ದಾರೆ.

ಮಿಥುನ: ಈ ರಾಶಿಯ ಮಹಿಳೆಯರಿಗೆ ಇಂದು ಅನಗತ್ಯವಾಗಿ ಅಪವಾದಗಳನ್ನು ಎದುರಿಸುವ ಸಂದರ್ಭಗಳು ಎದುರಾದೀತು. ತಾಳ್ಮೆ, ಸಂಯಮ ಅಗತ್ಯ. ಹಿಂದೆ ಹೂಡಿದ್ದ ಬಂಡವಾಳಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕಿರು ಸಂಚಾರ ಮಾಡುವ ಸಾಧ್ಯತೆ.

Aravind, BLN Swamy, Lingapura

ಕಟಕ: ಈ ರಾಶಿಯ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಸಿಗಲಿವೆ. ಕಾರ್ಯರಂಗದಲ್ಲಿ ಆಪ್ತರ ಸಹಾಯ ದೊರೆಯಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ಈ ರಾಶಿಯವರು ವೃತ್ತಿ ಮಾತ್ಸರ್ಯದಿಂದ ಅಂದುಕೊಂಡ ಸ್ಥಾನ ಮಾನ ಸ್ವಲ್ಪದರಲ್ಲೇ ಕೈ ತಪ್ಪಿ ಹೋದೀತು. ಮನಸ್ಸಿನ ನೆಮ್ಮದಿಗಾಗಿ ದೇವಾಲಯ ಸಂದರ್ಶಿಸಲಿದ್ದೀರಿ. ಕೃಷಿಕರಿಗೆ ಕೈಗೆ ಬಂದ ಬೆಳೆಗೆ ತಕ್ಕ ಬೆಲೆ ಸಿಗಲಿದೆ.

ಕನ್ಯಾ: ಈ ರಾಶಿಯವರು ಅನಿರೀಕ್ಷಿತ ಕಾರಣಗಳಿಗೆ ದೂರ ಸಂಚಾರ ಮಾಡಬೇಕಾದ ಸಂದರ್ಭ ಬರಲಿದೆ. ಇಷ್ಟಮಿತ್ರರ ಭೇಟಿಯಾಗಲಿದ್ದೀರಿ. ದೇಹಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಪ್ರೀತಿ ಪಾತ್ರರ ಕಷ್ಟಗಳಿಗೆ ನೆರವಾಗಲಿದ್ದೀರಿ.

ತುಲಾ: ಈ ರಾಶಿಯವರು ಹೊಸ ಬಗೆಯ ಯೋಜನೆಗಳನ್ನು ಜಾರಿಗೆ ತರಲು ಇದು ಸಕಾಲ. ಕಟ್ಟಡ ಕಾಮಗಾರಿ ಕೆಲಸಗಳಿಗೆ ವಿಘ‍್ನಗಳು ತೋರಿಬಂದರೂ ಅಂತಿಮವಾಗಿ ಕೆಲಸ ಮುಂದುವರಿಯಲಿದೆ. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ.

ವೃಶ್ಚಿಕ: ಈ ರಾಶಿಯವರು ಇಂದು  ಅಂದುಕೊಂಡ ಕೆಲಸ ಸುಗಮವಾಗಿ ನೆರವೇರಲಿದ್ದು, ಮನಸ್ಸಿಗೆ ಸಂತೋಷವಾಗುವುದು. ಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ಮನೆಯಲ್ಲಿ ಶುಭ ಮಂಗಳ ಕಾರ್ಯ ನೆರವೇರಿಸುವ ಸಾಧ್ಯತೆ.

ಧನಸ್ಸು: ಈ ರಾಶಿಯವರು ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ನೆರೆಹೊರೆಯವರೊಂದಿಗೆ ಅನಗತ್ಯ ಸಂಘರ್ಷ ಬೇಡ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಗಾತಿಯೊಂದಿಗೆ ಪರಾಮರ್ಶಿಸುವುದು ಉತ್ತಮ.

ಮಕರ: ಈ ರಾಶಿಯವರಿಗೆ ಬಹುದಿನಗಳ ಕನಸು ನನಸು ಮಾಡಲು ಮುಂದಾಗಲಿದ್ದಾರೆ. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಸಂಗಾತಿಯ ಮಾತುಗಳಿಗೆ ಕಿವಿಗೊಡಬೇಕಾಗುತ್ತದೆ. ಮನೆಗೆ ನೆಂಟರಿಷ್ಟರ ಆಗಮನ ಸಾಧ್ಯತೆಯಿದೆ.

ಕುಂಭ: ಈ ರಾಶಿಯವರು ಕೌಟುಂಬಿಕವಾಗಿ ಸಮಸ್ಯೆಗಳನ್ನು ಸಂಗಾತಿಯೊಂದಿಗೆ ಪರಾಮರ್ಶಿಸಿ ಪರಿಹರಿಸಲಿದ್ದೀರಿ. ಮಕ್ಕಳ ದೇಹಾರೋಗ್ಯ ಚಿಂತೆಗೆ ಕಾರಣವಾದೀತು. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ.

ಮೀನ: ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ವಿನಾಕಾರಣ ಬೇರೆಯವರ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಸಂವತ್ಸರ: ಶ್ರೀ ಪ್ಲವ ನಾಮ ಸಂವತ್ಸರ

ಆಯನ: ದಕ್ಷಿಣಾಯನ

ಋತು: ಶರದ್ ಋತು

ಮಾಸ: ಕಾರ್ತಿಕ ಮಾಸ

ಪಕ್ಷ: ಶುಕ್ಲ ಪಕ್ಷ       

ತಿಥಿ: ದ್ವಿತೀಯ 

ನಕ್ಷತ್ರ:  ಅನುರಾಧ ನಕ್ಷತ್ರ

ರಾಹುಕಾಲ: 09:13 ರಿಂದ 10:40

ಗುಳಿಕಕಾಲ: 06:18 ರಿಂದ 07:46

ಯಮಗಂಡಕಾಲ: 01:34 ರಿಂದ 03:01

ಈ ದಿನದ ವಿಶೇಷ: ಹಾಸನಾಂಬ ದೇವಾಲಯದ ಬಾಗಿಲು ಹಾಕುವುದು.

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

Exit mobile version