ಬೆಂಗ್ರಾ.ಜಿಲ್ಲೆ: ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ದೀಪಾವಳಿ(ಬಲಿಪಾಡ್ಯಮಿ) ದಿನದಂದು ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯ/ ಸಂಸ್ಥೆಗಳಲ್ಲಿ ಗೋವುಗಳನ್ನು ಪೂಜಿಸಲಾಗುವುದು.
ಗೋವುಗಳಿಗೆ ಸ್ನಾನ ಮಾಡಿಸಿ, ದೇವಾಲಯಕ್ಕೆ ಕರೆತಂದು ಆರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಲಾಗುವುದು ಹಾಗೂ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿತಿನಿಸು ಮುಂತಾದ ಗೋಗ್ರಾಸವನ್ನು, ಹಸುವಿಗೆ ನೀಡಿ ತಿನ್ನಿಸಿ ಧೂಪ, ದೀಪಗಳಿಂದ ಪೂಜಿಸಿ ನಮಸ್ಕರಿಸುವ ವ್ಯವಸ್ಥೆಯನ್ನು ಬಲಿಪಾಡ್ಯಮಿ ದಿನದಂದು ಸಂಜೆ 5:30 ರಿಂದ 6:30 ರವರೆಗೆ ಗೋಧೋಳಿ+ ಲಗ್ನದಲ್ಲಿ “ಗೋಪೂಜೆ” ಕಾರ್ಯಕ್ರಮ ನಡೆಸಲಾಗುವುದು.
“ಗೋಪೂಜೆ” ಕಾರ್ಯಕ್ರಮದಲ್ಲಿ ಶಿಷ್ಟಾಚಾರದಂತೆ ಕ್ರಮವಹಿಸುವುದರ ಜೊತೆಯಲ್ಲಿ ಗೋವುಗಳನ್ನು ದೇವಸ್ಥಾನಕ್ಕೆ ಕರೆತರುವುದು ಹಾಗೂ ಕಳುಹಿಸುವ ಪೂಜೆಯ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾವುದು. ಗೋವುಗಳು ಅಲಭ್ಯವಾದಲ್ಲಿ ಸ್ಥಳೀಯ ಗೋಶಾಲೆ ಮಠದಲ್ಲಿರುವ ಇಲಾಖೆಯ ಗೋವುಗಳು ಅಥವಾ ಹತ್ತಿರದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಸಂಪರ್ಕಿಸುವುದು ಹಾಗೂ ಪೂಜಾ ಸಂದರ್ಭದಲ್ಲಿ ಅಧಿಕಾರಿ/ ಸಿಬ್ಬಂದಿಗಳನ್ನು ಹಾಜರಿರುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……