Site icon ಹರಿತಲೇಖನಿ

ನಿಧನ ವಾರ್ತೆ: ರಂಗ ಕಲಾವಿದ ಕೆ.ಎಸ್.ರಾಮಾಂಜಿನಪ್ಪ

Channel Gowda
Hukukudi trust

ದೊಡ್ಡಬಳ್ಳಾಪುರ: ತಾಲೂಕಿನ ರಂಗ ಕಲಾವಿದ ಹಾಗೂ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಕೆ.ಎಸ್.ರಾಮಾಂಜಿನಪ್ಪ (78) ಮಂಗಳವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. 

Aravind, BLN Swamy, Lingapura

ಮೃತರು ಒಬ್ಬ ಮಗ, ಒಬ್ಬ ಮಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾಲೂಕಿಗೆ ಸಮೀಪದ ಕೊಡಿಗೆಹಳ್ಳಿಯಲ್ಲಿ ನೆರವೇರಿತು.

ಕೆ.ಎಸ್.ರಾಮಾಂಜಿನಪ್ಪ ರಂಗನಟರಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು.

Aravind, BLN Swamy, Lingapura

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಲಾವಿದರ ಸಂಘದ ಹಾಲಿ ಕಾರ್ಯದರ್ಶಿಯಾಗಿ, ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ಅಧ್ಯಕ್ಷರಾಗಿ, ಮಧುರೆ ಹೋಬಳಿ ಕಲಾವಿದರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕೆ.ಎಸ್.ರಾಮಾಂಜಿನಪ್ಪ ಅವರ ನಿಧನಕ್ಕೆ ತಾಲೂಕು ಕಲಾವಿದರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಕಲಾವಿದರು ಸಂತಾಪ ಸೂಚಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

Exit mobile version