ಬೆಂ.ಗ್ರಾ.ಜಿಲ್ಲೆ: 2021-22ನೇ ಸಾಲಿನ ಪಿ.ಎಂ.ಕೆ.ಕೆ.ವೈ ಕೌಶಲ್ಯಾಭಿವೃದ್ಧಿ ಕಾರ್ಯಯೋಜನೆಯಡಿಯಲ್ಲಿ ನೆಲಮಂಗಲ ತಾಲ್ಲೂಕಿನ ಗಣಿಬಾಧಿತ/ಗಣಿಬಾಧಿತವಲ್ಲದ ಗ್ರಾಮಗಳಲ್ಲಿನ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಕನಿಷ್ಟ 21 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಗರಿಷ್ಟ 40 ವರ್ಷ ಮೀರಿರಬಾರದು. ಗ್ರಾಮದಲ್ಲಿ ವಾಸವುಳ್ಳವರಾಗಿದ್ದು, ಬಿ.ಪಿ.ಎಲ್/ಪಿ.ಹೆಚ್.ಹೆಚ್ ಕುಟುಂಬದವರಾಗಿರಬೇಕು. ಒಂದು ಕುಟುಂಬಕ್ಕೆ ಒಬ್ಬ ಫಲಾನುಭವಿ ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ಹಾಗೂ ವಿಶೇಷ ಚೇತನರಿಗೆ ಆದ್ಯತೆ ನೀಡಲಾಗುವುದು. ಹೊಲಿಗೆ ತರಬೇತಿ ಹೊಂದಿರುವ ಅಭ್ಯರ್ಥಿಗಳಿಗೆ ಹಾಗೂ ಸಮಾಜದಲ್ಲಿ ಸಾಮಾಜಿಕ ತೊಂದರೆಗೊಳಗಾಲವರಿಗೆ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು (ವಿಧವೆಯರು,ವಿಚ್ಛೇದಿತರು, ಅನಾಥರು). ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ.
ಅರ್ಜಿದಾರರು 2021ರ ನವೆಂಬರ್ 15ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿ ಮತ್ತು ಅರ್ಜಿಗಾಗಿ ಕೈಗಾರಿಕಾ ವಿಸ್ತರಣಾಧಿಕಾರಿ, ನೆಲಮಂಗಲ, ರವರ ದೂರವಾಣಿ ಸಂಖ್ಯೆ: 9902740998 ಅಥವಾ ಕೊಠಡಿ ಸಂಖ್ಯೆ: 203 , 2ನೇ ಮಹಡಿ, ಜಿಲ್ಲಾಡಳಿತ ಭವನ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೂರವಾಣಿ ಸಂಖ್ಯೆ 080-29787458 ಅನ್ನು ಸಂಪರ್ಕಿಸಬಹುದು.
ವಿಶೇಷ ಸೂಚನೆ: ಸಾಕಷ್ಟು ಅರ್ಜಿದಾರರಿಗೆ ಮಾಹಿತಿ ದೊರೆತಿರುವುದಿಲ್ಲವೆಂದು ಪ್ರಸ್ತುತ ಅರ್ಜಿದಾರರ ಬೇಡಿಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ಹಿಂದೆ ಆಗಸ್ಟ್ 31 ರವರೆಗೆ ನೆಲಮಂಗಲ ತಾಲ್ಲೂಕಿನಿಂದ ಸ್ವೀಕಸಿರುವ ಅರ್ಜಿಗಳನ್ನು ಈ ಮೂಲಕ ಕೈಬಿಟ್ಟಿರುತ್ತದೆ. ಆದ್ದರಿಂದ ನೆಲಮಂಗಲ ತಾಲ್ಲೂಕಿನ ಗಣಿಬಾಧಿತ/ಗಣಿಬಾಧಿತವಲ್ಲದ ಗ್ರಾಮಗಳಲ್ಲಿನ ಆಸಕ್ತರು ಮೇಲ್ದಂಡ ಕಚೇರಿಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….