ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಿತು.
ಪುನೀತ್ ರಾಜಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು, ಮಾಜಿ ಸಿಎಂ ಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಚಿತ್ರರಂಗದ ಹಲವು ಗಣ್ಯರು ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು.
ಮುಂಜಾನೆ ಪುನೀತ್ ರಾಜ್‍ಕುಮಾರ್ ಅಂತಿಮಯಾತ್ರೆ ಮುಕ್ತಾಯಗೊಂಡಿತು. ಸೂರ್ಯ ಉದಯಿಸುವ ಮುಂಚೆಯೇ ಪುನೀತ್ ಪಾರ್ಥೀವ ಶರೀರ ಕಂಠೀರವ ಸ್ಟೇಡಿಯಂ ತಲುಪಿತು.
ನಿಗದಿಗಿಂತ ಸಮಯಕ್ಕಿಂತ ಎರಡು ಗಂಟೆ ಮುಂಚೆ ಆರಂಭವಾದ ಅಂತಿಮಯಾತ್ರೆ ಆರಂಭವಾಯಿತು.
ಬೆಳಿಗ್ಗೆ 6.30 ಕ್ಕೆ ಕ್ರೀಡಾಂಗಣ ಬಿಟ್ಟು, 8 ಕ್ಕೆ ಸ್ಟೂಡಿಯೋ ತಲುಪಲು ಉದ್ದೇಶಿಸಲಾಗಿತ್ತು. ಆದರೆ, ಅಭಿಮಾನಿಗಳ ದಟ್ಟಣೆ ಕಡಿಮೆಯಾಗದ ಮತ್ತು ರಸ್ತೆಯಲ್ಲಿ ಅಭಿಮಾನಿಗಳ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 4 ಗಂಟೆಗೆ ಅಂತಿಮ ದರ್ಶನ ಸ್ಥಗಿತಗೊಳಿಸಲಾಯಿತು.
ಬೆಳಗಿನ ಜಾವ 5 ಕ್ಕೆ ಅಂತಿಮಯಾತ್ರೆ ಆರಂಭವಾಯಿತು. ಗಾಜಿನ ಛಾವಣಿಯ ತೆರೆದ ವಾಹನದಲ್ಲಿ ಪುನೀತ್ ಪಾರ್ಥೀವ ಶರೀರ ಕಾಣುವಂತೆ ಇಡಲಾಗಿದ್ದು, ಕುಟುಂಬಸ್ಥರು ಪಕ್ಕದಲ್ಲಿ ಕುಳಿತಿದ್ದರು.
ಪೊಲೀಸ್ ಬಗಿ ಭದ್ರತೆಯಲ್ಲಿ ಯಾತ್ರೆ ಸಾಗಿದ್ದು, ಒಂದು ಕಿ.ಮೀ ಅಂತರದಲ್ಲಿ ಸಾರ್ವಜನಿಕರ ವಾಹನ ನಿಷೇಧಿಸಲಾಗಿತ್ತು.
ಗುಟ್ಟಹಳ್ಳಿ, ಮಲ್ಲೇಶ್ವರ, ಯಶವಂತಪುರ, ತುಮಕೂರು ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ನಿಂತು ಅಂತಿಯಯಾತ್ರೆ ಕಣ್ತುಂಬಿಕೊಂಡರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……