ದೊಡ್ಡಬಳ್ಳಾಪುರ: ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್, ಡಿಸ್ಟ್ರಿಕ್ಟ್ 317F. ಲಯನ್ಸ್ ಕ್ಲಬ್ ಬೆಂಗಳೂರು.ಸ್ಪಂದನ ಇವರ ವತಿಯಿಂದ ಶ್ರೀವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟಿಸಿದ ಲಯನ್ ಆಕಾಶ್ ಸುವರ್ಣ ರವರು ಮಾತಾನಾಡಿ, ಲಯನ್ಸ್ ಸಂಸ್ಥೆ ಕಳೆದ ನಾಲ್ಕು ತಿಂಗಳಲ್ಲಿ 9000 ಜನರಿಗೆ ನೇತ್ರ ತಪಾಸಣೆ ಹಾಗೂ ಸುಮಾರು ಜನರಿಗೆ ಶಸ್ತ್ರಚಿಕಿತ್ಸೆ ಮಾಡಿರುವ ಸಂಸ್ಥೆಯ ಸಾಧನೆ ಕುರಿತು ವಿವರಿಸಿದರು.
ಮುಖ್ಯ ಭಾಷಣಕಾರರಾದ ನಿವೃತ್ತ ಎಸ್ಪಿ ವೀರಭದ್ರೇಗೌಡ ಮಾತನಾಡಿ, ಮಕ್ಕಳಿಗೆ ಓದಿನ ಮಹತ್ವ ಮತ್ತು ಆರೋಗ್ಯದ ಮಹತ್ವ ವನ್ನು ತಿಳಿಸುವ ಜೊತೆಗೆ, ಲಯನ್ಸ್ ಕ್ಲಬ್ ಹುಟ್ಟು ಮತ್ತು ಕಾರ್ಯಕ್ಷೇತ್ರದ ವಿಷಯವನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಬಿ.ಆರ್.ವೇಣುಗೋಪಾಲ್ ಮಾತನಾಡಿ, ಮಕ್ಕಳು ಲಾಕ್ ಡೌನ್ ಸಂದರ್ಭದಲ್ಲಿ ಆನ್ಲೈನ್ ತರಗತಿಗಳಿಂದ ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ದೃಷ್ಟಿಯ ಸಮಸ್ಯೆ ಕಾಣಿಸುತ್ತಿರುವುದರಿಂದ ಇಂತಹ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕಾರಿ ಎಂದು ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಲಯನ್ ಮಮತ ವಹಿಸಿದ್ದರು, ಜಿಲ್ಲಾ GST ಕೊ ಆರ್ಡಿನೇಟರ್ ಲಯನ್ ವಿಜಯ ಕುಮಾರ್, Zone ಅಧ್ಯಕ್ಷೆ ನಾಗಮಣಿ, GST ತಂಡದ ಸದಸ್ಯರಾದ ಗೌರಿ ಕೃಷ್ಣರಾಜ್, ಹಿರಿಯ ಸದಸ್ಯರಾದ ಲಯನ್ ಶಿವಪ್ರಕಾಶ್, ಕಾರ್ಯದರ್ಶಿ ಲಾವಣ್ಯ ಹಾಗೂ ವೈದ್ಯರು ಮತ್ತು ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……