ದೊಡ್ಡಬಳ್ಳಾಪುರ: ನಗರದ ಹೊರವಲಯದ ಅರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಅರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆವತಿಯಿಂದ ಹದಿಹರೆಯದವರ ಸಮಸ್ಯೆಗಳ ಅನ್ವೇಷಣಾ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜೆ.ರಾಜೇಂದ್ರ, ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಪಠ್ಯ ವಸ್ತು ಹೊರತುಪಡಿಸಿ ಮಕ್ಕಳಲ್ಲಿ ಉಂಟಾಗುವ ಮಾನಸಿಕ ಸಮಸ್ಯೆಗಳನ್ನು ದೂರ ಮಾಡುವ ಲಯನ್ಸ್ ಕ್ಲಬ್ ನ ಈ ಉದ್ದೇಶ ನಿಜಕ್ಕೂ ಸ್ವಗತಾರ್ಹ ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿ ಕ್ವೆಸ್ಟ್ ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಜಿ.ಕೆ.ಉಷಾಕುಮಾರಿ ಮಾತನಾಡಿ, ಮಕ್ಕಳಲ್ಲಿ ಸ್ವಾಭಾವಿಕವಾಗಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ತಿಳಿದು ಅವರ ಮನಸ್ಸಿನಲ್ಲಾಗುವ ಸಮಸ್ಯೆಗಳನ್ನು ಅರಿತು ತಿಳುವಳಿಕೆ ನೀಡಿ, ಉತ್ತಮ ಭವಿಷ್ಯ ರೂಪಿಸುವುದು ನಮ್ಮ ಲಯನ್ಸ್ ಸಂಸ್ಥೆಯ ಕರ್ತವ್ಯವಾಗಿದೆ ಎಂದರು.
ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಕ್ವೆಸ್ಟ್ ಕಮಿಟಿಯ ಅಧ್ಯಕ್ಷೆ ದೇವಿಕಾರಾಣಿ ಮಾತನಾಡಿ, ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ನಮ್ಮ ಸಂಸ್ಥೆಯ ಎರಡು ಶಾಲೆಗಳನ್ನು ದತ್ತು ಪಡೆದು, ಮಕ್ಕಳಲ್ಲಿರುವ ಅನೇಕ ಗೊಂದಲಗಳನ್ನು, ಅವರಲ್ಲೂಂಟಾಗುವ ಕೋಪ,ಯಾರ ಬಳಿಯೂ ಭಾವನೆಗಳನ್ನು ಹಂಚಿಕೊಳ್ಳದಿರುವುದು ಇಂತಹ ಹತ್ತು ಹಲವು ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಕ್ರಮ ಇದಾಗಿದೆ. ಇಂತಹ ಕಾರ್ಯಕ್ರಮಕ್ಕೆ ಶಾಲೆಯಿಂದ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಆರ್.ಎಲ್.ಜೆ ಸಂಸ್ಥೆಯ ಸಿಇಒ ಜೆ.ನಾಗೇಂದ್ರ ಸ್ವಾಮಿ, ಲಯನ್ಸ್ ಕ್ಲಬ್‌ನ ರೀಜನ್ ಚೇರ್ ಪರ್ಸನ್, ಕೆ.ವಿ.ಪ್ರಭುಸ್ವಾಮಿ, ರೀಜನ್ ಚೇರ್ ಪರ್ಸನ್, ಪ್ರಿಯಾ.ಎ.ಆರ್, ಡಿಸ್ಟ್ರಿಕ್ಟ್ ಕ್ವೆಸ್ಟ್ ಸದಸ್ಯರಾದ ಸರ್ವಮಂಗಳ ಪ್ರಸನ್ನ ಕುಮಾರ್, ದೀಪ್ತಿ, ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಅರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ಕಾರ್ಯದರ್ಶಿ ಕೆ.ಎಂ.ಮುನಿರಾಮೇಗೌಡ, ಸಹ ಕಾರ್ಯದರ್ಶಿ ಕೆ.ವೀಣಾ, ಬಾಬುರೆಡ್ಡಿ ಮತ್ತಿತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ...