ದೊಡ್ಡಬಳ್ಳಾಪುರ: ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ಚಿಕ್ಕರಾಯಪ್ಪನಹಳ್ಳಿ ಕೆರೆಯಲ್ಲಿ ಭಾನುವಾರ ತೆಪ್ಪೋತ್ಸವ, ಹೂವಿನ ಆರತಿ ನಡೆಯಿತು.
ಚಿಕ್ಕರಾಯಪ್ಪನಹಳ್ಳಿ, ಚನ್ನಾಪುರ ಹಾಗೂ ದೊಡ್ಡರಾಯಪ್ಪನಹಳ್ಳಿ ಗ್ರಾಮದ ಮಹಿಳೆಯರು ಕೆರೆಯ ಏರಿ ಮೇಲಿನ ಗಂಗಮ್ಮನ ಗುಡಿಗೆ ಹೂವಿನ ಆರತಿಗಳನ್ನು ಬೆಳಗಿದರು.
ಮೂರು ಗ್ರಾಮಗಳಿಂದಲು ತಮಟೆ ವಾಧ್ಯಗಳೊಂದಿಗೆ ಆರಂಭವಾದ ಆರತಿಗಳ ಮೆರವಣಿಗೆ ಕೆರೆ ಏರಿ ಮೇಲೆ ಬಂದು ಸೇರುವ ವೇಳೆಗೆ ಮಧ್ಯಾಹ್ನ 2 ಗಂಟೆಯಾಗಿತ್ತು. ಏರಿಯ ಮೇಲೆ ಹಸಿರು ಚಪ್ಪರ ಹಾಕಿ ನಿರ್ಮಿಸಲಾಗಿದ್ದ ಗಂಗಮ್ಮನ ಗುಡಿ ಸಮೀಪ ಗ್ರಾಮದ ಹಿರಿಯ ಮಹಿಳೆಯರು ಗಂಗಮ್ಮದೇವಿಯ ಕುರಿತು ಹಾಡುಗಳನ್ನು ಹಾಡಿದರು.
ಮಹಾಮಂಗಳಾರತಿ ನಂತರ ನೀರಿನಲ್ಲಿ ತೇಲುವ ಮರಗಳಿಂದ ನಿರ್ಮಿಸಲಾಗಿದ್ದ ತೆಪ್ಪವನ್ನು ಹೂವು, ಬಾಳೆ ಕಂದುಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಹೂವಿನ ತೆಪ್ಪಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಸಮರ್ಪಣೆ ಮಾಡಿದ ನಂತರ ಕೆರೆಯಲ್ಲಿ ತೆಪ್ಪವನ್ನು ತೇಲಿ ಬಿಡಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ....