Site icon ಹರಿತಲೇಖನಿ

ಚನ್ನಾಪುರದಲ್ಲಿ ಗೋ ಪೂಜೆ ಮೂಲಕ ಬರಡು ರಾಸುಗಳ ತಪಾಸಣೆ ಮತ್ತು ಪಶು ಚಿಕಿತ್ಸಾ ಶಿಬಿರಕ್ಕೆ ಚಾಲನೆ

Channel Gowda
Hukukudi trust

ದೊಡ್ಡಬಳ್ಳಾಪುರ: ತಾಲೂಕಿನ ಚನ್ನಾಪುರದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಹಾಲು ಉತ್ಪಾದಕರ ಸಹಕಾರ ಸಂಘ ಚನ್ನಾಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬರಡು ರಾಸುಗಳ ತಪಾಸಣೆ ಮತ್ತು ಪಶು ಚಿಕಿತ್ಸಾ ಶಿಬಿರವನ್ನು ಗುರುವಾರ ಆಯೋಜಿಸಲಾಗಿತ್ತು.

Aravind, BLN Swamy, Lingapura

ಈ ಸಂದರ್ಭದಲ್ಲಿ ಮಾತನಾಡಿದ ಮೇಳೆಕೋಟೆ ಪಶುವೈದ್ಯಾಧಿಕಾರಿ ಡಾ.ಎಂ.ಮಂಜುನಾಥ್, ಸರಿಯಾದ ಸಮಯಕ್ಕೆ ಲಸಿಕೆಗಳನ್ನು ಹಾಕಿಸುವುದರಿಂದ ರಾಸುಗಳಲ್ಲಿ ರೋಗಗಳನ್ನು ತಡೆಯಬಹುದು. ಹಾಗೆಯೇ ಕಾಲಕ್ಕೆ ಸರಿಯಾಗಿ ಹಸಿ ಮೇವು ಮತ್ತು ಒಣ ಮೇವುಗಳನ್ನು ಕೊಡುವುದರಿಂದ ಸಧೃಡ ಹಾಲಿನ ಇಳುವರಿ ನಿರಂತರವಾಗಿ ಪಡೆಯಬಹುದು ಎಂದರು.

ಪಶು ವೈದ್ಯಕೀಯ ಸಹಾಯಕ ವ್ಯವಸ್ಥಾಪಕ ಡಾ.ಮೊಹಮ್ಮದ್ ಜಿಯಾಉಲ್ ಮಾತನಾಡಿ, ನಾಟಿ ಔಷಧಿಗಳ ಸಮರ್ಪಕ ಬಳಕೆಯಿಂದ ರಾಸುಗಳಲ್ಲಿ ಅದ್ಬುತ ಫಲಿತಾಂಶಗಳನ್ನು ಕಾಣಬಹುದು ಎಂದರು. 

Aravind, BLN Swamy, Lingapura

ಗೋವಿನ ಪೂಜೆಯೊಂದಿಗೆ ಪ್ರಾರಂಭವಾದ ಶಿಬಿರ, ನಾಟಿ ಔಷಧಿಗಳ ಬಳಕೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ನಂತರ ರಾಸುಗಳ ತಪಾಸಣೆ ಮಾಡಿ ಔಷಧಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾದ್ಯಾಪಕ ಡಾ.ಆಶೋಕ ದೊಡ್ದಮನಿ, ಮೇಳೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೀತಿ .ಎಸ್.ಗೌರೀಶ್, ಉಪಾಧ್ಯಕ್ಷ ಮುನಿರಾಜು, ಸದಸ್ಯ ಸಿ.ಪಿ.ಜಯಣ್ಣ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿನಾರಾಯಣಸ್ವಾಮಿ, ಪ್ರಯೋಜಕರಾದ ವರ್ಷಾ ಆಸೂಸಿಯೇಟ್ಸ್, ನಿಯೋ ಸ್ಪಾರ್ಕ್, ರೇಸ್ಪಲ್ ಫಾರ್ಮಾ ಕಂಪನಿ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಜಿ.ಕೆ.ವಿ.ಕೆ. ವಿಧ್ಯಾರ್ಥಿಗಳ ನಡೆಸಿಕೊಟ್ಟರು.

ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version