ದೊಡ್ಡಬಳ್ಳಾಪುರ: ತಾಲೂಕಿನ ಅತಿ ದೊಡ್ಡ ಹಾಗೂ ಪುರಾತನ ಕೆರೆ ಎಂದು ಕರೆಯಲ್ಪಡುವ ಗುಂಡಮಗೆರೆ ಕೆರೆ ಶನಿವಾರ ಬೆಳಗ್ಗಿನ ಜಾವ ಕೋಡಿ ಬಿದ್ದಿದೆ.
404.69 ಎಕ್ಟೇರ್ ವಿಸ್ತೀರ್ಣದ ಗುಂಡಮಗೆರೆ ಕೆರೆ ಎಂದೂ ಬತ್ತದ ಕೆರೆ ಎಂದು ಕರೆಯಲ್ಪಡುತ್ತದೆ.
ಕೋಡಿ ಬಿದ್ದ ಕೆರೆಯನ್ನು ನೋಡಲು ಅಕ್ಕಪಕ್ಕದ ಜನರು ತಂಡೋಪ ತಂಡವಾಗಿ ಭೇಟಿ ನೀಡುತ್ತಿದ್ದಾರೆ.
2017 ರಲ್ಲಿ ಕೋಡಿ ಬಿದ್ದಿದ್ದ ಕೆರೆ, ನಂತರ 2019ರಲ್ಲಿ ಕೋಡಿ ಬಿದ್ದಿತ್ತು. ಮತ್ತೆ ಎರಡು ವರ್ಷಗಳ ನಂತರ 2021ರಲ್ಲಿ ಕೋಡಿ ಬಿದ್ದು ಮತ್ತೊಂದು ಅಚ್ಚರಿ ಸೃಷ್ಟಿಸಿದೆ.
ಕೋಡಿ ಬಿದ್ದ ನೀರು ಹೊಸಹಳ್ಳಿ ಕೆರೆ ಹಾಗೂ ನಿಂಗನಾಯಕನ ಕೆರೆಗೆ ರಭಸದಿಂದ ಹರಿಯುತ್ತಿದ್ದು, ಎರಡು ವರ್ಷಗಳ ನಂತರ ಕೆರೆ ತುಂಬಿರುವುದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….