ಹಿರಿಯರ ಅನುಭವ ಅಮೃತವಿದ್ದಂತೆ;ಅಂತಹ ಅಮೃತ ಸವಿಯಿಂದ ವಂಚಿತರಾಗದಿರಿ: ಜಿಲ್ಲಾಧಿಕಾರಿ ಆರ್.ಲತಾ ಯುವಕರಿಗೆ ಕರೆ

ಚಿಕ್ಕಬಳ್ಳಾಪುರ: ತಂದೆ, ತಾಯಿ, ಅಜ್ಜಿ, ತಾತ ಹೀಗೆ ಇನ್ನಿತರ ಹಿರಿಯರನ್ನು ಒಳಗೊಂಡ ತುಂಬು ಕುಟುಂಬದಲ್ಲಿ ಮಾತ್ರ ನೆಮ್ಮದಿಯುತ ಜೀವನವನ್ನು ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ “ಹಿರಿಯ ನಾಗರಿಕರು ಹಿರಿಯ ನಾಗರಿಕರೊಂದಿಗೆ ಸ್ನೇಹ” ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸಿಮಿತವಾಗಬಾರದು ಪ್ರತಿ ದಿನವು ಹಿರಿಯನ್ನು ಗೌರವಯುತವಾಗಿ ಪಾಲನೆ, ಪೋಷಣೆ ಮಾಡುವ ಮೂಲಕ ಆಚರಿಸಬೇಕು. ಇಂದಿನ ದಿನಗಳಲ್ಲಿ ತಂದೆ, ತಾಯಿ, ಅಜ್ಜಿ, ತಾತ ರಿಂದ ದೂರವಿದ್ದು, ವಾಸಮಾಡುವಂತಹ ವಿಭಕ್ತ ಕುಟುಂಬಗಳನ್ನೇ  ನಾವಿಂದು ಹೆಚ್ಚಾಗಿ ಕಾಣುತ್ತಿದ್ದೇವೆ. ಈ ರೀತಿ ದೂರವಾಸವಿರುವುದರಿಂದ ಹಿರಿಯ ನಾಗರಿಕರಿಗಿಂತ ಕಿರಿಯ ಪೀಳಿಗೆಯವರ ಜೀವನದಲ್ಲಿ ದೊಡ್ಡ ನಷ್ಟ ಉಂಟಾಗಲಿದೆ. ಹಿರಿಯರ ಜೀವಿತಾವಧಿಯ ಅನುಭವದಿಂದ ಕೂಡಿದ ಸಲಹೆಗಳು ಉತ್ತಮವಾಗಿರುತ್ತವೆ. ಅವರ ಅನುಭವದ ಅಮೃತ ಸವಿಯನ್ನು ಕಿರಿಯರು ಇಂದು ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿ ಅಂತಹ  ಹಿರಿಯರೊಂದಿಗಿನ  ಸಹ  ಜೀವನದಿಂದ  ವಂಚಿತರಾಗದಂತೆ  ಯುವಕರಲ್ಲಿ  ಕರೆ ನೀಡಿದರು.

ಲಿಖಿತ ಅರ್ಜಿ ಕೊಟ್ಟರೆ ಆಸ್ತಿ ವಾಪಸ್: ಮಕ್ಕಳು ತಂದೆ, ತಾಯಿಯನ್ನು ಸರಿಯಾಗಿ ಪಾಲನೆ ಪೋಷಣೆ ಮಾಡದೆ ನಿರ್ಲಕ್ಷವಹಿಸಿದರೆ, ಅಂತಹ ಹಿರಿಯ ನಾಗರಿಕರು ಉಪ ವಿಭಾಗಾಧಿಕಾರಿಗೆ ಲಿಖಿತ  ದೂರು ಅರ್ಜಿ ನೀಡಿದರೆ  ತಮ್ಮ ಮಕ್ಕಳಿಗೆ ನೊಂದಣಿ ಮಾಡಿಕೊಟ್ಟಿರುವ ಹಿಂದಿನ ಆಸ್ತಿ ಪತ್ರಗಳು ರದ್ದಾಗಿ ತಮ್ಮ ಹೆಸರಿಗೆ ಆಸ್ತಿಯನ್ನು  ಹಿಂಪಡೆಯಲು “2007ರ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ”ಯನ್ವಯ ಅವಕಾಶವಿರುತ್ತದೆ ಅಲ್ಲದೆ ಪ್ರತಿ ತಿಂಗಳ ಜೀವನ ನಿರ್ವಹಣೆಗಾಗಿ ಜೀವನಾಂಶವನ್ನು ಪಡೆದುಕೊಳ್ಳಲು  ಕಾನೂನಿನಲ್ಲಿ  ಅವಕಾಶವಿದೆ. ಇಂತಹ ಪ್ರಕರಣಗಳು 60 ದಿನಗಳ ಒಳಗೆ  ತ್ವರಿತವಾಗಿ ವಿಲೇವಾಗಲಿವೆ ಇದಕ್ಕೆ ಯಾವುದೇ ವಕೀಲರ ವಕಾಲತ್ತು ಸಹ ಅವಶ್ಯಕತೆ ಇರುವುದಿಲ್ಲ. ಈ ರೀತಿ ಕಾನೂನಾತ್ಮಕ ಹೋರಾಟ ಮಾಡುವಂತಹ ಪರಿಸ್ಥಿತಿ ಯಾರಿಗೂ ಕೂಡ ಬರದಿರಲಿ ಎಂದರು.

ಹಿರಿಯ ನಾಗರಿಕರು ಹೃದಯವಂತರು: ತಮ್ಮ ತಂದೆ ತಾಯಿಗಳನ್ನು ಸಲಹದೆ ವೃದ್ಧಾಶ್ರಮಗಳಿಗೆ ಸೇರಿಸಿರುವಂತಹ ಧಾರುಣ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ. ಅಂತಹ ತಂದೆ ತಾಯಿಗಳನ್ನು, ಹಿರಿಯರನ್ನು ವೃದ್ಧಾಶ್ರಮಗಳಲ್ಲಿ ನಾನು ಭೇಟಿಯಾದಾಗ “ನನ್ನ ಮಕ್ಕಳು ನನಗೆ ಅನ್ಯಾಯ ಮಾಡಿದರೂ ಪರವಾಗಿಲ್ಲ. ನನ್ನನ್ನು ಪಾಲನೆ  ಮಾಡದೆ  ಮನೆಯಿಂದ  ಆಚೆ ಹಾಕಿದರೂ ಸಹ ನನ್ನ ಮಕ್ಕಳು ಚೆನ್ನಾಗಿರಲಿ, ಮಕ್ಕಳು ನನ್ನ ಪಾಲಿನ ಚಿನ್ನ, ರನ್ನರೇ ಆಗಿದ್ದಾರೆ ಎಂದು ಹೇಳುತ್ತಾರೆ. ಅಂತಹ ದೊಡ್ಡಗುಣ ಇರುವುದು ಹಿರಿಯ ನಾಗರಿಕರಲ್ಲಿ ಮಾತ್ರ ಹಾಗೂ ಮಕ್ಕಳು ಏನೇ ತಪ್ಪು  ಮಾಡಿದರೂ ಕ್ಷಮಿಸುವ  ಕ್ಷಮಾಗುಣದ ಹೃದಯ ಇರುವುದು ಹೆತ್ತ ಕರುಳಿಗೆ ಮಾತ್ರ. ಆದ್ದರಿಂದ ತಂದೆ ತಾಯಿಗಳು ಬೆಲೆ ಕಟ್ಟಲಾಗದ ನಮ್ಮ ದೊಡ್ಡ ಆಸ್ತಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮೆಲರ ಜವಾಬ್ದಾರಿ ಎಂದು ಭಾವನಾತ್ಮಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾವು ಮತ್ತು ಮಾರುಕಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ವಿ.ನಾಗರಾಜು ಅವರು ಮಾನತಾಡಿ, ನಮ್ಮ ಹಿರಿಯರು ಬಾಲ್ಯದಲ್ಲಿ ನಮ್ಮನ್ನು ಸಲಹಿ ಬೆಳೆಸಿದ ರೀತಿ ಇಳಿವಯಸ್ಸಿನಲ್ಲಿ ನಾವು ಅವರನ್ನು ಪೋಷಣೆ, ಪಾಲನೆ ಮಾಡಬೇಕು. ಅವರು ಸಮಾಜದಲ್ಲಿ ಜೀವನ ಮಾಡಲಿಕ್ಕೆ ನಮ್ಮ ನಿಜವಾದ ಮಾರ್ಗದರ್ಶಕರಾಗಿದ್ದಾರೆ. ಅವರ ಆರೋಗ್ಯ ಹಾಗೂ ಅವರ ಕಷ್ಟ ಸುಖಗಳನ್ನು  ವಿಚಾರಿಸಿಕೊಂಡು ಹಿರಿಯರಿಗೆ ಒಂಟಿತನ ಕಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಮಾನತಾಡಿ, ಭಾರತೀಯ ಸಂಸ್ಕೃತಿಯಲ್ಲಿ ಕೌಟುಂಬಿಕ ವ್ಯವಸ್ಥೆ ಇಂದೂ  ಕೂಡ ಸುಭದ್ರವಾಗಿದೆ. ತಂದೆ, ತಾಯಿ, ಅಜ್ಜಿ, ತಾತರೊಂದಿಗೆ ಜೀವನ ಮಾಡುವ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಪುಣ್ಯದ ಜೀವನ ಸಿಕ್ಕರೆ ಅದನ್ನು ಜೋಪಾನವಾಗಿ ಕಾಪಾಡುವುದು ನಮ್ಮ ಧರ್ಮ. ಹಿರಿಯರನ್ನು ನಿರ್ಲಕ್ಷಿಸುವ, ಶೋಷಿಸುವ ಕಿರಿಯರನ್ನು ದಂಡಿಸಿ, ಹಿರಿಯ ನಾಗರಿಕರನ್ನು ಸಂಪೂರ್ಣ ರಕ್ಷಣೆ ನೀಡಲು ಪೊಲೀಸ್ ಇಲಾಖೆ ಯಾವಾಗಲೂ ಬದ್ಧವಾಗಿದೆ ಎಂದು ತಿಳಿಸಿ, ಹಿರಿಯ ನಾಗರಿಕರ ಬಗ್ಗೆ ಗೌರವ ತೋರದ ಯುವ ಜನತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಳ್ಳದ ಜನರು ಪಾಪಿಗಳು. ಅಂತಹವರ ಜೀವನ ವಿನಾಶಯುತವಾದದ್ದು ಎಂದರು.

ಕಾರ್ಯಕ್ರಮದಲ್ಲಿ 62 ವರ್ಷದ ಶ್ರೇಷ್ಠಕೃಷಿಕ-ಸಿ.ಎನ್.ಪಿಳ್ಳವೆಂಕಟಸ್ವಾಮಿ, 70 ವರ್ಷದ ಮೃದಂಗ ಪ್ರವೀಣ-ಎಚ್.ಎಸ್.ಗೋಪಾಲ, 65 ವರ್ಷದ ಜನಪದ ಕಲಾವಿದ ಗೊರವರ ಕುಣಿತದ-ಆಂಜಿನಪ್ಪ, 71 ವರ್ಷದ ಕನ್ನಡ ಸಾಹಿತಿ-ವಲಿಭಾಷ, ಹೈನುಗಾರಿಕೆ ಸಾಧಕಿ-70 ವರ್ಷದ ರತ್ನಮ್ಮ, 82 ವರ್ಷದ ರಂಗಭೂಮಿ ಕಲಾವಿದ-ಬಿ.ಆರ್.ಗೋಪಾಲ್, 65 ವರ್ಷದ ಸಮಾಜ ಸೇವಕ- ವಿ.ಮುನಿರಾಜು ಅವರನ್ನು ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ ಗೌರಮ್ಮ, ಸರೋಜ, ಸಣ್ಣಮ್ಮ ಹಾಗೂ ಇನ್ನಿತರರಿಗೆ ಪಿಂಚಣಿಗೆ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡಾ ಸ್ಪರ್ಧೆಗಳಲ್ಲಿನ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಶ್ವತ್ಥಮ್ಮ, ತಹಶೀಲ್ದಾರ್ ಗಣಪತಿಶಾಸ್ತ್ರಿ ಹಾಗೂ ಹಿರಿಯ ನಾಗರಿಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಶಾಕಿರಣ, ಅಂದ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮೃದಂಗ, ಹಾರ್ಮೋನಿಯಂ ಸೇರಿದಂತೆ ಇನ್ನಿತರ ಸಂಗೀತ ವಾದ್ಯಗಳನ್ನು ನುಡಿಸಿಕೊಂಡು ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು, ನೆರೆದಿದ್ದ ಸರ್ವರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….

ರಾಜಕೀಯ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ ಆಯ್ಕೆ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ

ನಗರಸಭೆ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯಲ್ಲಿ ವಿ.ಎಸ್.ರವಿಕುಮಾರ್ Doddaballapura

[ccc_my_favorite_select_button post_id="99525"]
Doddaballapura; ಕೃಷ್ಣ ಬೈರೇಗೌಡ ಆರ್ಭಟಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿ.. ಮಹಿಳಾ ಸಿಬ್ಬಂದಿ ಕಣ್ಣೀರು Video ನೋಡಿ

Doddaballapura; ಕೃಷ್ಣ ಬೈರೇಗೌಡ ಆರ್ಭಟಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿ.. ಮಹಿಳಾ ಸಿಬ್ಬಂದಿ ಕಣ್ಣೀರು Video

ಬಾಯಿಗೆ ಬಂದಂತೆ ಉತ್ತರ ಕೊಡುವುದನ್ನು ಬಿಟ್ಟು ಕನಿಷ್ಠ ನನ್ನ ಮಾತಿಗೆ ಮರ್ಯಾದೆ ನೀಡಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶಿಲ್ದಾರ್ ವಿರುದ್ಧ ಹರಿಹಾಯ್ದರು. Doddaballapura

[ccc_my_favorite_select_button post_id="99562"]
Ayyappaswamy garland: ಸಿಲಿಂಡರ್ ಸ್ಪೋಟ ಪ್ರಕರಣ: ದುರ್ಘಟನೆಯಿಂದ ಬೇಸತ್ತು ಅಯ್ಯಪ್ಪ ಮಾಲೆ ತೆಗೆದ ಸ್ವಾಮಿ.. ಕಣ್ಣೀರು

Ayyappaswamy garland: ಸಿಲಿಂಡರ್ ಸ್ಪೋಟ ಪ್ರಕರಣ: ದುರ್ಘಟನೆಯಿಂದ ಬೇಸತ್ತು ಅಯ್ಯಪ್ಪ ಮಾಲೆ ತೆಗೆದ

ಉಳಿದ 7 ಜನರ ಜೀವ ಉಳಿದರೆ ಮಾತ್ರ ಮುಂದೆ ಅಯ್ಯಪ್ಪ ಮಾಲೆ ಧರಿಸುತ್ತೇನೆ ಎಂದು ಮಂಜುನಾಥ್ ಕಣ್ಣೀರು ಹಾಕಿದ್ದಾರೆ. Ayyappaswamy garland

[ccc_my_favorite_select_button post_id="99555"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
Suicide: ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ..!

Suicide: ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ..!

ತಮ್ಮ ಸೆಕ್ಟರ್ 47ರಲ್ಲಿರುವ ಅಪಾರ್ಟ್‌ ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಮತ್ತು ಅವರೊಂದಿಗೆ ವಾಸಿಸುತ್ತಿದ್ದ ಸ್ನೇಹಿತರೊಬ್ಬರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. Suicide

[ccc_my_favorite_select_button post_id="99567"]
Accident| Doddaballapura: ಕಾರು ಡಿಕ್ಕಿ.. ದೇವರ ಪೂಜೆಗೆ ಹೂ ಬಿಡಿಸುತ್ತಿದ್ದ ಮಹಿಳೆ ದುರ್ಮರಣ

Accident| Doddaballapura: ಕಾರು ಡಿಕ್ಕಿ.. ದೇವರ ಪೂಜೆಗೆ ಹೂ ಬಿಡಿಸುತ್ತಿದ್ದ ಮಹಿಳೆ ದುರ್ಮರಣ

ಗೌರಿಬಿದನೂರು ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆ ಬದಿ ಅಳವಡಿಸಿದ್ದ ತಂತಿ ಬೇಲಿ ನುಗ್ಗಿ ಬಂದ ಡಿಕ್ಕಿ ಹೊಡೆದ Accident

[ccc_my_favorite_select_button post_id="99558"]

ಆರೋಗ್ಯ

ಸಿನಿಮಾ

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ ತೆಲುಗು ಚಿತ್ರರಂಗ..!

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ

ಸಭೆ ಯಶಸ್ವಿಯಾಗಿಲ್ಲ ಎನ್ನಲಾಗುತ್ತಿದೆ. ಬೆನಿಫಿಟ್ ಶೋಗಳಿಗೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ Pushpa 2

[ccc_my_favorite_select_button post_id="99541"]
error: Content is protected !!