ದೊಡ್ಡಬಳ್ಳಾಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 152ನೇ ಜನ್ಮದಿನದ ಅಂಗವಾಗಿ, ವಿದ್ಯಾಧಾರೆ ಗೆಳೆಯರ ಬಳಗದಿಂದ ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಾಲೂಕಿನ 27 ಸರ್ಕಾರಿ ಶಾಲೆಗಳನ್ನು ಆಯ್ಕೆಮಾಡಿಕೊಂಡು ಶುಕ್ರವಾರವೇ ಸಸಿಗಳನ್ನು ವಿತರಿಸಿರುವ ವಿದ್ಯಾಧಾರೆ ಗೆಳೆಯರ ಬಳಗ ಸದಸ್ಯರು, ಸ್ಥಳೀಯ ಜನಪ್ರತಿನಿದಿಗಳು, ಶಿಕ್ಷಕರಿಂದ ಸಸಿ ನೆಡೆಸಿದ್ದಾರೆ.
ಈ ಕಾರ್ಯದಲ್ಲಿ ವಿದ್ಯಾಧಾರೆ ಗೆಳೆಯರ ಬಳಗದ ರೇಣುಗೋಪಾಲ್, ಹರೀಶ್, ಗ್ರಾಪಂ ಸದಸ್ಯರಾದ ನವೀನ್, ತಿಪ್ಪರಾಜು, ಹಿರಿಯ ಮುಖಂಡರಾದ ಎಚ್.ನರಸೀಯಪ್ಪ, ಲಕ್ಷ್ಮೀಕಾಂತ್, ಕೆಂಪಲಿಂಗಣ್ಣ, ಮುಖ್ಯಶಿಕ್ಷಕ ಸಿದ್ದರಾಮಪ್ಪ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….