ದೊಡ್ಡಬಳ್ಳಾಪುರ: ನಗರದ ವಾಕಿಂಗ್ 24 ಗೆಳೆಯರ ತಂಡ ಪುರಾತನ ಕಲ್ಯಾಣಿಯನ್ನು ಸ್ವಚ್ಚಗೊಳಿಸಿ, ಶ್ರಮದಾನ ಮಾಡುವ ಮೂಲಕ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನವನ್ನು ಆಚರಿಸಿದರು.
ಬೆಳ್ಳಂಬೆಳಗ್ಗೆ ಕೋರ್ಟ್ ರಸ್ತೆಯಲ್ಲಿನ ಪುರಾತನ ಕಲ್ಯಾಣಿ ಬಳಿ ಸೇರಿದ ವಾಕಿಂಗ್ 24 ಗೆಳೆಯರು ಕಲ್ಯಾಣಿಯನ್ನು ಸ್ವಚ್ಚತಾ ಕಾರ್ಯಕ್ಕೆ ಇಳಿದರು. ಇವರ ಕಾರ್ಯಕ್ಕೆ ನಗರಸಭೆ ಪೌರ ಕರ್ಮಿಕರು ಜೊತೆಯಾದರು.
ವಿಷಯ ತಿಳಿದ ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ ಸ್ಥಳಕ್ಕೆ ಭೇಟಿ ನೀಡಿ ವಾಕಿಂಗ್ 24 ಗೆಳೆಯರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……..