ರಾಮನಗರ: ಜೆಡಿಎಸ್ ನ ಯುವಕರು ಎದ್ದ ಸಂದರ್ಭದಲ್ಲಿ ಆರ್ಎಸ್ಎಸ್ ಈ ರಾಜ್ಯದಿಂದ ಓಡಿ ಹೋಗಿರುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಗುಡುಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪರ ವಿರೋಧ ಚರ್ಚಗೆ ಕಾರಣವಾಗಿದೆ.
ಬಿಡದಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಸಂಘಟನಾ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿರುವ ಸಂಸದ ಪ್ರಜ್ವಲ್ ರೇವಣ್ಣ, ಈ ರಾಜ್ಯದಲ್ಲಿ ಯುವಕರು ಇಂದು ಆರ್ಎಸ್ಎಸ್, ಆರ್ಎಸ್ಎಸ್ ಎನ್ನುತ್ತಿದ್ದಾರೆ ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕಿದೆ.
ಇವರಿಗೆಲ್ಲ ಒಂದು ಮಾತು ಹೇಳಿದ್ದೇನೆ ಹುಲಿ ಮಲಗಿದೆ ಕಾಯಿರಿ.. ಜೆಡಿಎಸ್ ಯುವಕರು ಎದ್ದ ದಿನ ಆರ್ಎಸ್ಎಸ್ ನಡೆ ದೆಹಲಿ ಕಡೆ ಎಂದು ಓಡಿ ಹೋಗುತ್ತದೆ, ಜೆಡಿಎಸ್ ಯುವಕರ ನಡೆ ವಿಧಾನಸೌಧದ ಕಡೆ ಹೊರಟಿರುತ್ತದೆ ಎಂದು ಹೇಳಿದ್ದಾರೆ.
ವಿಧಾನಸೌಧದತ್ತ ಮುಖಮಾಡಿ ನಿಲ್ಲೋ ಕೆಲಸ ಜೆಡಿಎಸ್ ಯುವಕರು ಮಾಡಬೇಕು. ನಿಲ್ಲಿಸೋ ಕೆಲಸ ಪಕ್ಷದ ನಾಯಕರು ಮಾಡುತ್ತಾರೆ. ನಮ್ಮ ಪಕ್ಷದ ಯುವಕರು ತಮ್ಮಲ್ಲಿ ಇರುವ ಗುಂಪುಗಾರಿಕೆ ಕಡಿಮೆ ಮಾಡಿಕೊಂಡು ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿಚಾರಗಳು ಅವರ ಯೋಜನೆಗಳು ಸಾಧನೆಗಳನ್ನ ಸಾಧ್ಯವಾದಷ್ಟು ಜನರಿಗೆ ತಲುಪಿಸಬೇಕೆಂದು ಹೇಳಿದ್ದಾರೆ
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……