ದೊಡ್ಡಬಳ್ಳಾಪುರ: ನಂದಿಬೆಟ್ಟದ ಅರ್ಕಾವತಿ ನದಿ ಉಗಮಸ್ಥಾನದಿಂದ ಹೆಸರಘಟ್ಟದವರೆಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಹಲವಾರು ಅಧ್ಯಯನ ಹಾಗೂ ಅನುಷ್ಠಾನ ಯೋಜನೆಯನ್ನು ಕೈಗೊಂಡಿದ್ದು ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಬೆಂಗಳೂರಿನ ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾದ ಹಿರಿಯ ಯೋಜನಾಧಿಕಾರಿ ವೈ.ಟಿ.ಲೋಹಿತ್ ಹೇಳಿದರು.
ತಾಲ್ಲೂಕಿನ ದಂಡುದಾಸನಕೊಡಿಗೇಹಳ್ಳಿ ಗ್ರಾಮದಲ್ಲಿ ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಹಾಗೂ ಜಿಕೆವಿಕೆ ಸಹಯೋಗದಲ್ಲಿ ನಡೆದ ವಿಶ್ವ ನದಿಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷವು ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರ ಆಚರಿಸಲಾಗುತ್ತದೆ. ನದಿಗಳು ಜನರ ಜೀವನಾಡಿಗಳಾಗಿವೆ. ಮನುಷ್ಯರಿಂದ ಮೊದಲುಗೊಂಡು ಸಕಲ ಜೀವರಾಶಿಗಳ ಉಗಮ ಸ್ಥಾನ ಹಾಗೂ ಬದುಕಿನ ಮೂಲ ಸೆಲೆಯಾಗಿದೆ. ನಂದಿ ಬೆಟ್ಟದಲ್ಲಿ ಉಗಮಿಸುವ ಅರ್ಕಾವತಿ ನದಿಯು ಪಶ್ಚಿಮಾಭಿಮುಕವಾಗಿ ಸಾಸಲು ಸಾಲು ಕೆರೆಗಳ ಮೂಲಕ ವರ್ಷವಿಡೀ ಹರಿಯುತೊತ್ತು. ಆದರೆ ಇಂದು ಕೆರೆಗಳಿವೆಯೇ ಹೊರತು ವಾಸ್ತದಲ್ಲಿ ಕಣ್ಮರೆಯಾಗಿದೆ. ಬದಲಾಗಿರುವ ಕೃಷಿ ಪದ್ದತಿಗಳೇ ನದಿಯ ಹರಿವು ಬತ್ತಿ ಹೋಗಲು ಮೂಲ ಕಾರಣವಾಗಿದೆ.ಇವುಗಳ ಬದಲಾವಣೆಗಳಿಂದ ಮತ್ತೆ ನದಿ ಪಾತ್ರೆದಲ್ಲಿನ ಅಂತರ್ಜಲ ಮೇಲಕ್ಕೆ ಬರಲು ಸಾಧ್ಯವಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಮುನಿಕೃಷ್ಣಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಹಾಗೂ ಅರ್ಕಾವತಿ ನದಿ ಹರಿಯುವಂತಾಗಬೇಕು ಎನ್ನುವುದೇ ಈ ಭಾಗದ ಜನರ ಆಶಯವಾಗಿದೆ ಎಂದರು.
ಅಂತರ್ಜಲ ನಿರ್ದೇಶನಾಲಯದ ಭೂಮಿ ಮದನ್ ಮಾತನಾಡಿ, ಅಂತರ್ಜಲ ಮರುಪೂರ್ಣಕ್ಕೆ ಅಗತ್ಯವಾದ ಮಾರ್ಗದರ್ಶನಗಳನ್ನು ಆಸಕ್ತರಿಗೆ ನೀಡಲಾಗುವುದು. ಅಂತರ್ಜಲ ನಿರ್ದೇಶನಾಲಯದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಯಲ್ಲಿ ಕುಸಿಯುತ್ತಿರುವ ಅಂತರ್ಜಲದ ಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಕರವೇ ತಾಲ್ಲೂಕು ಅಧ್ಯಕ್ಷ ಡಿ.ಎನ್.ಮಂಜುನಾಥ್, ಅಂತರ್ಜಲ ನಿರ್ದೇಶನಾಲಯದ ಮಿಥುನ್, ಅಟಲ್ ಭೂ ಜಲ ಯೋಜನೆಯ ಪವನ್, ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾದ ಶಶಿಕಲಾ ಐಯ್ಯರ್, ಜಿಕೆವಿಕೆ ವಿದ್ಯಾರ್ಥಿ ಸಂಚಾಲಕ ಪುನೀತ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……