ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಚಿಕಿತ್ಸೆಗೆ ದಾಖಲಾಗಿದ್ದ 11 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಹೊಸದಾಗಿ 24 ಕರೊನಾ ಪ್ರಕರಣಗಳು ವರದಿಯಾಗಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ವರದಿಯನ್ವಯ ನೆಲಮಂಗಲ 04 ಪುರುಷರು, 02 ಮಹಿಳೆಯರು ಸೇರಿ 06. ಹೊಸಕೋಟೆ ತಾಲೂಕಿನ ಓರ್ವ ಪುರುಷ. ದೇವನಹಳ್ಳಿ ತಾಲೂಕಿನ 12 ಪುರುಷರು, 01 ಮಹಿಳೆ ಸೇರಿ 13. ದೊಡ್ಡಬಳ್ಳಾಪುರ ತಾಲೂಕಿನ 04 ಪುರುಷರು ಸೇರಿ ಜಿಲ್ಲೆಯಲ್ಲಿ ಒಟ್ಟು 24 ಮಂದಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ 98 ಮಂದಿ ಸೋಂಕಿತರನ್ನು ನಿಗಾ ಘಟಕದಲ್ಲಿಡಲಾಗಿದೆ ಎನ್ನಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 168ಕ್ಕೆ ಏರಿಕೆಯಾಗಿದೆ.
ಉಳಿದಂತೆ ಜಿಲ್ಲೆಯ 2128 ಮಂದಿಯನ್ನು ಕಡ್ಡಾಯ ಗೃಹ ಬಂದನದಲ್ಲಿ ಇಡಲಾಗಿದ್ದು, ಇಂದಿನ ವರದಿಯ ಪ್ರಕಾರ 297 ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……