ಬೆಂಗಳೂರು: ಕೋವಿಡ್ ಸೋಂಕಿಂದ ಮರಣ ಹೊಂದಿದವರ ಪರಿಹಾರಕ್ಕೆ ದಾಖಲೆ ಕೇಳುತ್ತಿರುವ ಸರ್ಕಾರ, ಪ್ರಧಾನಿ ಮೋದಿ ಪೋಟೋ ಮುದ್ರಿಸಿ ಸರ್ಟಿಫಿಕೇಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಪ್ರಸ್ತುತ ಸದನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕೋವಿಡ್ ಕುರಿತಾದ ಮಹತ್ವದ ಚರ್ಚೆಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಂದ ಮೃತ ಪಟ್ಟವರಿಗೆ ಸರ್ಕಾರ ಪರಿಹಾರ ನೀಡದೆ ವಿಳಂಬ ಧೋರಣೆ ತೋರುತ್ತಿದೆ.
ಕರೊನಾ ಸೋಂಕಿನಿಂದ ಮೃತ ಪಟ್ಟವರು ದಾಖಲೆ ನೀಡುತ್ತಿಲ್ಲ ಎಂಬುದೇ ಕಾರಣವಾಗಿದ್ದರೆ, ಕೋವಿಡ್ ಲಸಿಕೆ ಪಡೆದವರಿಗೆ ಮೋದಿ ಫೋಟೋ ಹಾಕಿ ಸರ್ಟಿಫಿಕೇಟ್ ನೀಡಿದಂತೆ, ಪರಿಹಾರಕ್ಕಾಗಿ ಕೋವಿಡ್ ನಿಂದ ಸತ್ತವರಿಗೂ ಮೋದಿ ಪೋಟೋ ಇರುವ ಸರ್ಟಿಫಿಕೇಟ್ ನೀಡುವಂತೆ ಒತ್ತಾಯಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……