ಬೆಂಗಳೂರು: ಹಿಂದೂ ವ್ಯಕ್ತಿ ಜೊತೆ ಅನ್ಯಕೋಮಿನ ಸಹೋದ್ಯೋಗಿಯೊಬ್ಬಳಿದ್ದ ಕಾರಣವನ್ನೇ ಮುಂದಿಟ್ಟುಕೊಂಡ ಗುಂಪೊಂದು ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಘಟನೆ ವರದಿಯಾದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಹಲ್ಲೆ ನಡೆಸಿದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಸಹೋದ್ಯೋಗಿಳಾಗಿದ್ದ ಮಹೇಶ್ ಹಾಗೂ ಅನ್ಯಕೋಮಿನ ಯುವತಿಯ ಮೇಲೆ ಅನಾಮಿಕರು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆದ ದಿನ ಬ್ಯಾಂಕ್‌ನಲ್ಲಿ ಹೆಚ್ಚು ಕೆಲಸವಿದ್ದು, ಮುಗಿದಾಗ ತಡವಾಗಿತ್ತು. ಆ ವೇಳೆ ಮಹಿಳೆ ಏಕಾಂಗಿಯಾಗಿ ಹೋಗುವುದು ಭದ್ರತಾ ದೃಷ್ಟಿಯಿಂದ ಸರಿಯಲ್ಲ ಎಂದ ಹಿರಿಯ ಅಧಿಕಾರಿಗಳು ಮಹಿಳೆಗೆ ಡ್ರಾಪ್ ನೀಡುವಂತೆ ಮಹೇಶ್‌ಗೆ ಸೂಚಿಸಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಮಹೇಶ್ ಮಹಿಳೆಗೆ ಡ್ರಾಪ್ ನೀಡಲು ಮುಂದಾಗಿದ್ದಾನೆ.
ಆದರೆ ಇದನ್ನು ಗಮನಿಸಿ ಸಹಿಸದ ಪುಂಡರ ಗುಂಪೊಂದು ಅನ್ಯ ಕೋಮಿನ ಮಹಿಳೆ ಜೊತೆ ತೆರಳುತ್ತಿದ್ದ ಮಹೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮಹಿಳೆಯಿಂದ ಆಕೆಯ ಮನೆಯವರ ಫೋನ್ ನಂಬರ್ ಕೂಡಾ ಪಡೆದಿದ್ದಾರೆ. ಅಲ್ಲದೇ ಬೈಕ್ ಬಿಟ್ಟು ಆಟೋದಲ್ಲಿ ತೆರಳುವಂತೆಯೂ ಸೂಚಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದಿದ್ದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..