Site icon ಹರಿತಲೇಖನಿ

ದೊಡ್ಡಬಳ್ಳಾಪುರ: ಶೇ.40ರಷ್ಟು ಗಣೇಶ ಮೂರ್ತಿ ವಿಸರ್ಜನೆ / ಪೊಲೀಸರ ಕಣ್ಗಾವಲು

Channel Gowda
Hukukudi trust

ದೊಡ್ಡಬಳ್ಳಾಪುರ: ಗಣೇಶ ಚತುರ್ಥಿಯ ಆಚರಣೆ ಶುಕ್ರವಾರ ಸಂಭ್ರಮ, ಸಡಗರದಿಂದ ಜರುಗಿತು. ವಿವಿಧೆಡೆಯ ಸಾರ್ವಜನಿಕ ಗಣೇಶೋ­ತ್ಸವ ಸಮಿತಿ ವತಿಯಿಂದ ಮೂರ್ತಿಗಳನ್ನು ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿದರೆ, ಮನೆಗಳಲ್ಲಿ ಚಿಕ್ಕ ಮೂರ್ತಿಗಳನ್ನು ತಂದು ಶ್ರದ್ಧಾ, ಭಕ್ತಿಯಿಂದ ಪೂಜಿಸಿದರು. 

Aravind, BLN Swamy, Lingapura

ಮೊದಲನೆಯ ದಿನ ತಾಲೂಕಿನಾಧ್ಯಂತ ಶೇ.40ರಷ್ಟು ಗಣೇಶ ಮೂರ್ತಿಗಳು ವಿಸರ್ಜನೆಯಾಗಿದ್ದು, ಭಾನುವಾರ ಹೆಚ್ಚಿನ ಮೂರ್ತಿಗಳು ವಿಸರ್ಜನೆಯಾಗಲಿವೆ ಎಂದು ಅಂದಾಜಿಸಲಾಗಿದೆ.

ಪ್ರತಿಷ್ಠಾಪನೆ ವೇಳೆ ಅನೇಕರು ಸಾಂಪ್ರದಾಯಿಕ ವಾದ್ಯ, ಸಂಗೀತ ಹಾಗೂ ಪಟಾಕಿ ಸಿಡಿಸಿ ಗಣೇಶ­ನನ್ನು ಬರಮಾಡಿಕೊಂಡರು. ವಿವಿಧ ಹೂವು, ವಿದ್ಯುತ್ ಬೆಳಕಿನಿಂದ ಆಲಂಕ­ರಿ­ಸಿದ ಮಂಟಪದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಲಂಬೋದರನಿಗೆ ಪ್ರಿಯ­ವಾದ ಕಡುಬು, ಪಂಚ ಕಜ್ಜಾಯ, ಮೋದಕ ಸೇರಿದಂತೆ ವಿವಿಧ ಬಗೆಯ ನೈವೇದ್ಯ ಸಮರ್ಪಿಸಿದರು. ಹಿರಿಯರು ಕಿರಯರೆನ್ನದೇ ಎಲ್ಲ ವಯೋಮಾನ ದವರು ಹೊಸ ಬಟ್ಟೆ ತೊಟ್ಟು, ದೇವರಿಗೆ ಆರತಿ ಬೆಳಗಿ ಸಂಭ್ರಮಿಸಿದರು.

Aravind, BLN Swamy, Lingapura

ವಿಸರ್ಜನೆ ವೇಳೆ. ‘ಗಣಪತಿ ಬಪ್ಪಾ ಮೋರಯಾ!’ ಎಂಬ ಮುಗಿಲು ಮುಟ್ಟುವ ಭಕ್ತರ ಘೋಷ ವಾಕ್ಯ ಮುಗಿಲು ಮುಟ್ಟಿತ್ತು.

ಶೇ.40ರಷ್ಟು ವಿಸರ್ಜನೆ: ಈ ಬಾರಿ ತಾಲೂಕಿನ 206 ಕಡೆಗಳಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗಿದ್ದು, ಮೊದಲ ದಿನ ಶೇ.40 ರಷ್ಟು ವಿಸರ್ಜನೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.

ದೊಡ್ಡಬಳ್ಳಾಪುರ ನಗರಸಭೆಯಲ್ಲಿ 40, ಕಸಬಾ ಮತ್ತು ತೂಬಗೆರೆ ವ್ಯಾಪ್ತಿಯಲ್ಲಿ 96, ದೊಡ್ಡಬೆಳವಂಗಲ ಮತ್ತು ಮಧುರೆ ವ್ಯಾಪ್ತಿಯಲ್ಲಿ 50 ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20 ಸೇರಿದಂತೆ ಒಟ್ಟು 206 ಗಣೇಶೋತ್ಸವಗಳಿಗೆ ಅನುಮತಿ ದೊರೆತಿತ್ತು.

ನಗರದ ಡಿ.ಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಸಮೀಪದ ನಾಗರಕೆರೆ ಅಂಚಿನಲ್ಲಿ ಸಾಮೂಹಿಕ ವಿಸರ್ಜನೆಗಾಗಿ ನಗರಸಭೆಯಿಂದ ವಿಶೇಷ ಹೊಂಡದ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ನಗರಸಭೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಜರಿದ್ದು, ಗಣೇಶ ಮೂರ್ತಿ ವಿಸರ್ಜನೆ ಮಾಡಲು ಸಹಕರಿಸಿದರು.

ಮೂರು ಡ್ರಮ್‍ಗಳನ್ನು ಒಳಗೊಂಡ ನಾಲ್ಕು ಟ್ರ್ಯಾಕ್ಟರ್‍ಗಳು ನಗರದ ವಿವಿದೆಡೆ ಸಂಚರಿಸುತ್ತಿದ್ದು, ಮನೆಯಲ್ಲಿ ಪ್ರತಿಷ್ಟಾಪಿಸುವ ಗಣೇಶ ಮೂರ್ತಿಗಳನ್ನು ಸಂಚಾರಿ ವಾಹನಗಳಲ್ಲಿಯೇ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಪೊಲೀಸ್ ಕಣ್ಗಾವಲು: ಕೋವಿಡ್ ನಿಯಮ ಹಾಗೂ ಯಾವುದೇ ಅಹಿತಕರ ಘನೆ ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನಕಣ್ಣಿಟ್ಟಿದ್ದರು.

ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸತೀಶ್, ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಗೋವಿಂದ್, ರಾಜಾನುಕುಂಟೆಯ ಸಬ್ಇನ್ಸ್ಪೆಕ್ಟರ್ ಭವಿತಾ, ದೊಡ್ಡಬೆಳವಂಗಲ ಸಬ್ ಇನ್ಸ್ಪೆಕ್ಟರ್ ಗಜೇಂದ್ರ, ಹೊಸಹಳ್ಳಿ ಸಬ್ ಇನ್ಸ್ಪೆಕ್ಟರ್ ರಂಗಶಾಮಯ್ಯ, ಎಎಸ್ಐ ನಾಗೇಶ್, ಮುನಿರಾಜು, ಕೇಶವಮೂರ್ತಿ ಹಾಗೂ ಸಿಬ್ಬಂದಿಗಳು ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಿರುವ ಸ್ಥಳಗಳಿಗೆ ಹಾಗೂ ವಿಸರ್ಜನೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

Exit mobile version