ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದ ಹಿನ್ನೆಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 51849 ಹೆಕ್ಟರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗುವ ಮೂಲಕ ಬಿತ್ತನೆ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ.
ಜಿಲ್ಲೆಯಲ್ಲಿ ರಾಗಿಯಲ್ಲಿ ಕಂಡು ಬಂದಿರುವ ಈ ಸಮಸ್ಯೆಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ. 50%ರ ರಿಯಾಯಿತಿಯಲ್ಲಿ ಸಸ್ಯ ಸಂರಕ್ಷಣೆ ಔಷಧಿಗಳು ಲಭ್ಯವಿದ್ದು, ಜಿಲ್ಲೆಯ ರೈತರು ಸವಲತ್ತುಗಳನ್ನು ಪಡೆಯುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಡಾ.ಜಿ.ಎಸ್ ಜಯಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳವಣಿಗೆ ಹಂತದಲ್ಲಿರುವ ರಾಗಿ ಬೆಳೆಯಲ್ಲಿ ಬೆಂಕಿ ರೋಗದ ಬಾಧೆ ಕಂಡು ಬಂದಿದ್ದು, ರಾಗಿ ಬೆಳೆಯ ಎಲೆಗಳ ಮೇಲೆ ಕಂದು ಬಣ್ಣದ ವಜ್ರಾಕಾರದ ಚುಕ್ಕೆಗಳು ಕಾಣಿಸಿಕೊಂಡು, ಅವುಗಳು ಒಂದಕ್ಕೊಂದು ಸೇರಿ ಎಲೆಗಳು ಒಣಗಿದಂತೆ ಕಂಡು ಬಂದಿರುತ್ತದೆ. ರೋಗವನ್ನು ಹತೋಟಿ ವಹಿಸದಿದ್ದಲ್ಲಿ ಇಳುಕಿನ ಮೇಲೆ ಕಂದು ಬಣ್ಣ ಕಾಣಿಸಿಕೊಂಡು ತೆನೆ ಇಳುಕು ಕಾಳು ಕಟ್ಟದೆ ಇಳುವರಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಬೆಂಕಿ ರೋಗದ ಬಾಧೆಯನ್ನು ಹತೋಟಿಗೆ ತರಲು ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಯಾದ ಡಾ.ಮಂಜುನಾಥ್ ಅವರ ಸಲಹೆಯಂತೆ ಶೀಲಿಂಧ್ರನಾಶಕಗಳಾದ ಮ್ಯಾಂಕೋಜೆಬ್ 75 ಡಬ್ಲ್ಯೂಪಿ 2 ಗ್ರಾಂ ಅಥವಾ ಕಾರ್ಬೆಂಡಜಿA 50 ಡಬ್ಲ್ಯೂಪಿ 1 ಗ್ರಾಂ ಅಥವಾ ಜೈನೆಬ್ 75 ಡಬ್ಲ್ಯೂಪಿ 2.5 ಗ್ರಾಂ ಅಥವಾ ಕಾರ್ಬೆಂಡಜಿA 12% + ಮ್ಯಾಂಕೋಜೆಬ್ 63% 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಮತ್ತು ಸಾಧ್ಯವಾದಷ್ಟು ಬೆಳಿಗ್ಗೆ 12.00 ಗಂಟೆಗೂ ಮುನ್ನ ಅಥವಾ ಮಧ್ಯಾಹ್ನ 3.00 ಗಂಟೆಯ ನಂತರ ಸಿಂಪರಣೆಯನ್ನು ಕೈಗೊಳ್ಳಬೇಕು ಹಾಗೂ ಸಿಂಪಡಿಸುವ ಸಂದರ್ಭದಲ್ಲಿ ಸಿಂಪರಣಾ ದ್ರಾವಣವು ಅತಿ ಸೂಕ್ಷ್ಮ ಹನಿಯ ರೂಪದಲ್ಲಿ ಬೀಳುವ ನೋಜಲ್‌ಗಳನ್ನು ರೈತರು ಬಳಸಬೇಕು.(ಸಂಗ್ರಹ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..