ದೊಡ್ಡಬಳ್ಳಾಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ 2021-22ನೇ ಸಾಲಿಗೆ ತಾಲ್ಲೂಕಿನ ಕಸಬಾ ಹೋಬಳಿಯ ಕಂಟನಕುಂಟೆ ಗ್ರಾಮದಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಪಡೆಯಲು 11ನೇ ತರಗತಿಯಿಂದ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿನಿಲಯದಲ್ಲಿ ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯ, ಪ್ರತಿ ವಿದ್ಯಾರ್ಥಿಗೆ ಮಂಚ, ಹಾಸಿಗೆ, ಹೊದಿಕೆ, ಉಚಿತ ಭೋಜನ, ವಸತಿ ಸೌಲಭ್ಯ, ಕಂಪ್ಯೂಟರ್ ತರಬೇತಿ, ಗ್ರಂಥಾಲಯ ವ್ಯವಸ್ಥೆ, ಸಂರಕ್ಷಣೆಗೆ ಸಿಸಿಟಿವಿ ಕ್ಯಾಮರಾ ಸೌಲಭ್ಯವಿರಲಿದ್ದು, ವಿದ್ಯಾರ್ಥಿನಿಲಯದಲ್ಲಿ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ವಿದ್ಯಾರ್ಥಿನಿಯರಿಗೆ 38 ಸ್ಥಾನ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 12 ಸ್ಥಾನಗಳನ್ನು ಮೀಸಲಿರಿಸಿದೆ.
ಪ್ರವೇಶ ಪಡೆಯಲು ಅರ್ಹತೆಗಳು ಹಾಗೂ ಅರ್ಜಿಗಳಿಗಾಗಿ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿ ಮತ್ತು ತಾಲ್ಲೂಕು ಮಾಹಿತಿ ಕೇಂದ್ರ, ಜಾಮೀಯಾ ಮಸೀದಿ, ಕುಂಬಾರಪೇಟೆ, ಕೋರ್ಟ್ ರೋಡ್, ದೊಡ್ಡಬಳ್ಳಾಪುರ ಟೌನ್ ದೂ. ಸಂ.: 080-27627444, ವಿಸ್ತರಣಾಧಿಕಾರಿಗಳು ಮೊ.ಸಂ.: 97417777995, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯ, ಕಂಟನಕುಂಟೆ ಗ್ರಾಮ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ಟೌನ್, ವಾರ್ಡನ್ ಮೊ.ಸಂ.: 9686574866 ಅನ್ನು ಸಂಪರ್ಕಿಸುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನಂ. 216, 2ನೇ ಮಹಡಿ, ಜಿಲ್ಲಾಧಿಕಾರಿಗಳ ಹೊಸ ಸಂಕೀರ್ಣ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110, ದೂರವಾಣಿ ಸಂಖ್ಯೆ: 080-29787455 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..