ದೊಡ್ಡಬಳ್ಳಾಪುರ: ನಗರದ ಮಹಾವೀರ್ ಜೈನ ಶ್ವೇತಾಂಬರ್ ಮಂದಿರದಲ್ಲಿ ಜೈನ ಮಾಸದ ಪರ್ಯುಶನ್ ಮಹಾಪರ್ವಕ್ಕೆ ಚಾಲನೆ ನೀಡಲಾಗಿದ್ದು, ಮಹಾವೀರ ಸ್ವಾಮಿಗಳಿಗೆ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳು ಜರುಗುತ್ತಿವೆ.
8 ದಿನಗಳ ಕಾಲ ಉಪವಾಸ ಹಾಗು ಮೌನ ವ್ರತದಿಂದ ಪರ್ಯುಶನ್ ವ್ರತವನ್ನು ಆಚರಿಸಲಾಗುತ್ತದೆ.
ದೇವಾಲಯದಲ್ಲಿ ಸ್ತೋತ್ರ ಪಠಣೆ, ಸ್ನಾಥ್ರ ಪೂಜಾ , ಪ್ರತಿಕ್ರಮಣ ಹಾಗು ಭಜನೆ ಮಾಡಲಾಗುತ್ತದೆ. ಹಬ್ಬದ ಕೊನೆಯ ದಿನವನ್ನು ಸಂವತ್ಸರಿ ಎಂದು ಕರೆಯುತ್ತಾರೆ ಹಾಗು ಇದು ಪರಸ್ಪರ ಕ್ಷಮಾಪನೆ ದಿನವಾಗಿದ್ದು, ತಿಳಿದೋ ತಿಳಿಯದಯೋ ಯಾರಿಗಾದರೂ ನೋಯಿಸಿದ್ದರೆ ಕ್ಷಮೆಯನ್ನು ಯಾಚಿಸುತ್ತಾರೆ.
ಕ್ರೋದವೆಂಬ ಕಷಾಯವನ್ನು ಕೋಪ ತಾಪವನ್ನು , ಒರಟುತನವನ್ನು ಬಿಟ್ಟು ಸರಳ ಸಭ್ಯ, ಸ್ವಾತಿಕನಾಗಿ ಬಾಳುವುದೇ ಉತ್ತಮ ಕ್ಷಮಾ ಧರ್ಮವಾಗಿದೆ ಎನ್ನುತ್ತಾರೆ ಜೈನಾಚಾರ್ಯ ನರರತ್ನಸುರಿಜಿ .
ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಆಚರಣೆ ಇರುತ್ತದೆ. ಹಾಗೆ ನಮಗೆ ಪರ್ವ ಪರ್ಯುಶನ್ ಪವಿತ್ರ ಹಬ್ಬವಾಗಿದ್ದು , ನಮ್ಮ ಮನಸ್ಸು ಹಾಗೂ ದೇಹದ ಹಿಡಿತ ಸಾಸಲು ಅನುಕೂಲವಾಗುತ್ತದೆ. ನಮ್ಮಿಂದ ಯಾರಿಗೂ ತೊಂದರೆ ಆಗದೇ ಯಾವ ಜೀವ ಸಂಕುಲಕ್ಕೂ ನೋವು ನೀಡಲು ನಾವು ಬಯಸುವುದಿಲ್ಲ. ಉಪವಾಸದಿಂದ ನಮ್ಮ ದೇಹದಲ್ಲಿರುವ ಕೊಬ್ಬಿನಾಂಶವನ್ನು ನಾಶಮಾಡಿ ನಾವು ಆರೋಗ್ಯದಿಂದ ಇರಲು ಸಹಾಯವಾಗುತ್ತದೆ ಎನ್ನುತ್ತಾರೆ ಜೈನ ಸಮುದಾಯದ ಸಾಹಿಲ್ ಸುರಾಣ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..