ದೊಡ್ಡಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿದ ಮಿನಿ ಟೆಂಪೋ ಉರುಳಿ ಬಿದ್ದ ಪರಿಣಾಮ, ಸಾಗಿಸಲಾಗುತ್ತಿದ್ದ ಸುಮಾರು 20 ಸಾವಿರ ಮೌಲ್ಯದ ಫಾರಂ ಕೋಳಿಗಳು ಸಾವನಪ್ಪಿರುವ ಘಟನೆ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ್ಲುಕುಂಟೆ ಕ್ರಾಸ್ ಬಳಿ ಸಂಭವಿಸಿದೆ.
ನಗರದ ಪ್ರಖ್ಯಾತ ಹೆಚ್.ಎ.ಜೆ ಚಿಕನ್ ಸೆಂಟರ್ ಗೆ ಸೇರಿದ ಮಿನಿ ಟೆಂಪೋ, ಇಂದು ಬೆಳಗ್ಗೆ ಫಾರಂನಿಂದ ಕೋಳಿಗಳನ್ನು ತುಂಬಿಕೊಂಡು ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ವಾಹನದಲ್ಲಿದ್ದ ಚಾಲಕ ಹಾಗೂ ಇತರ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಅದರೆ, ಸುಮಾರು 20 ಸಾವಿರ ಮೌಲ್ಯದ ಕೋಳಿಗಳು ಮೃತಪಟ್ಟು ನಷ್ಟ ಉಂಟಾಗಿದೆ ಎಂದು ಹೆಚ್.ಎ.ಜೆ ಚಿಕನ್ ಸೆಂಟರ್ ಮಾಲೀಕ ಅಂಬರೀಶ್ ಹರಿತಲೇಖನಿಗೆ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..