ದೊಡ್ಡಬಳ್ಳಾಪುರ: ನಗರಸಭೆಯ 31ವಾರ್ಡ್ಗಳಿಗೆ ನಡೆಯುತ್ತಿರುವ ಮತದಾನ ಅಂತ್ಯಕ್ಕೆ ಕೇವಲ 40 ನಿಮಿಷ ಮಾತ್ರ ಬಾಕಿ ಉಳಿದಿದ್ದು, 6 ಗಂಟೆಯ ಮತಗಟ್ಟೆ ಕೇಂದ್ರದ ಒಳಗೆ ಸರದಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ.
ಉಳಿದಂತೆ ನಗರದ 63 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
5 ಗಂಟೆಯ ವರದಿಯನ್ವಯ 22777 ಮಂದಿ ಗಂಡು, 22418 ಮಂದಿ ಹೆಣ್ಣು ಸೇರಿ ಒಟ್ಟು 45195 ಮಂದಿ ಮತ ಚಲಾಯಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..