ದೊಡ್ಡಬಳ್ಳಾಪುರ: ಸೆ.3ರಂದು ನಗರಸಭೆಯ 31ವಾರ್ಡ್ ಗಳಿಗೆ ಚುನಾವಣೆ ನಡೆಯಲಿದ್ದು ಚುನಾವಣೆಯಲ್ಲಿ ಯಾವ ಕೈಬೆರಳಿಗೆ ಶಾಹಿ ಗುರುತು ಹಚ್ಚಬೇಕು ಎನ್ನುವ ಗೊಂದಲ ಪರಿಹಾರವಾಗಿದೆ.
ಚುನಾವಣೆಯಲ್ಲಿ ಮತದಾರರಿಗೆ ಯಾವ ಬೆರಳಿಗೆ ಶಾಹಿಯನ್ನು ಹಚ್ಚಬೇಕು ಎಂಬುದರ ಕುರಿತು ಚುನಾವಣೆ ಅಧಿಕಾರಿಗಳು ರಾಜ್ಯ ಚುನಾವಣೆ ಆಯೋಗದ ನಿರ್ದೇಶನ ಕೋರಿದ್ದರು.
ಈ ವಿಚಾರವಾಗಿ ರಾಜ್ಯ ಚುನಾವಣೆ ಆಯೋಗದ ಸಿಬ್ಬಂದಿ ಲಕ್ಷ್ಮೀ ಅವರನ್ನು ದೂರವಾಣಿ ಮೂಲಕ ಅಧಿಕಾರಿಗಳು ಸಂಪರ್ಕಿಸಿದ್ದು, ಇತ್ತೀಚೆಗೆ ಯಾವುದೇ ಚುನಾವಣೆ ನಡೆಯದ ಕಾರಣ, ನಾಳೆ (ಸೆ.3)ರಂದುನಡೆಯುವ ನಗರಸಭೆ ಚುನಾವಣೆಯಲ್ಲಿ ಶಾಹಿಯನ್ನು ಎಡಗೈ ತೋರು ಬೆರಳಿಗೆ ಹಚ್ಚುವಂತೆ ನಿರ್ದೇಶಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್ ಸೂಚನೆ ನೀಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..